dtvkannada

ಶಾಲೆಗೆ ನುಗ್ಗಿ ಇನ್ವೇಟರ್ ಮತ್ತು ಕಂಪ್ಯೂಟರ್ ಕದಿಯಲು ಯತ್ನಿಸುತ್ತಿದ್ದ 4 ಜನ ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಪೆರ್ಲ ಬೈಪಾಡಿ ಬಂದಾರಿನಲ್ಲಿ ಎ.30 ರಂದು ರಾತ್ರಿ ನಡೆದಿದೆ.

ಧರ್ಮಸ್ಥಳ ಸಮೀಪದ ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಬಂದಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ 4 ಜನ ಕಳ್ಳರು ನುಗ್ಗಿ ಕಳವು ಯತ್ನ ನಡೆಸುತ್ತಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಕಅಳರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ ಎನ್ನಲಾಗಿದೆ. ಕಳ್ಳರನ್ನು ಹಿಡಿದು ಎಳೆದೊಯ್ಯುತ್ತಿದ್ದ ವೀಡಿಯೋ ವೈರಲ್ ಆಗಿದೆ.

ಈ ಕಳ್ಳರ ಗ್ಯಾಂಗ್ ಕಡಬ ಪರಿಸರದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಭಜರಂಗದಳ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು ಎಂದು ಹೇಳಲಾಗುತ್ತಿದೆ. ಕಡಬ ಪರಿಸರದಲ್ಲೂ ಹಲವೆಡೆ ಮನೆ ಕಳ್ಳತನ, ಟಯರ್ ಕಳ್ಳತನ,ಬಿದಿ ಬದಿ ಸೋಲಾರ್ ಬ್ಯಾಟರಿ ಕಳ್ಳತನ ನಡೆದಿದ್ದು ಈ ತಂಡವೇ ಕೃತ್ಯಗಳನ್ನು ಮಾಡಿರಬಹುದೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಪೊಲೀಸರ ಸೂಕ್ತ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

By dtv

Leave a Reply

Your email address will not be published. Required fields are marked *

error: Content is protected !!