';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಡುಪಿ: ತನ್ನ ಜೀವನದ ಮಹತ್ತರ ಘಟ್ಟದಲ್ಲಿ ಒಂದಾದ ಮದುವೆ ಎಂಬ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ನವವಧು ಒಬ್ಬಳು ಮದುವೆಗೂ ಮುನ್ನ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಮದುವೆಗೆ ಧರಿಸಿದ್ದ ಅದೇ ಉಡುಪು ಧರಿಸಿಕೊಂಡು ಬಂದ ವಧು ಮೆಲಿಟಾ ಸುವಾರಿಸ್ ಇವರು ಕಾಪು ಕ್ಷೇತ್ರದ ಪಲಿಮಾರು ಗ್ರಾಮ ಪಂಚಾಯತ್‌ನ ಅವರಾಲು ಮಟ್ಟು ಮತಗಟ್ಟೆಯಲ್ಲಿ ಮತ ಚಲಾಯಿಸಿ ಮಾದರಿಯಾಗಿದ್ದಾರೆ.ಮತ ಚಲಾಯಿಸಿ ನಂತರ ಮೆಲಿಟಾ ಸುವಾರಿಸ್ ತನ್ನ ವಿವಾಹ ನಡೆಯುವ ಸ್ಥಳವಾದ ಚರ್ಚ್ ಗೆ ತೆರಳಿದ್ದಾರೆಂದು ತಿಳಿದು ಬಂದಿದೆ.