ಬೆಂಗಳೂರು: 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ನಾಳೆ ಮದ್ಯಾಹ್ನ 12:30ಕ್ಕೆ ಹೊರ ಬೀಳಲಿದ್ದು.
ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅದೃಷ್ಟ ಪರೀಕ್ಷೆಗೆ ಕ್ಷಣಗಣನೆ ಶುರುವಾಗಿದೆ.

ಇದೀಗ ಬೆಳಿಗ್ಗೆ 11:30 ರ ಹೊತ್ತಿಗೆ ಸುದ್ದಿಗೋಷ್ಠಿ ನಡೆಸಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರು ಇದೇ ವೇಳೆ ವೆಬ್ ಸೈಟ್ ಮೂಲಕ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ.
ಎಸ್ ಎಸ್ ಎಲ್ ಸಿ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಒತ್ತಿ.
http://karresults.nic.in
ಫಲಿತಾಂಶ ಚೆಕ್ ಮಾಡೋದು ಹೇಗೆ?
ಹಂತ 1: ಅಧಿಕೃತ ವೆಬ್ ಸೈಟ್ ಗೆ ಹೋಗಿ: karresults.nic.in
ಹಂತ 2: ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಸ್ಟ್ರೀಮ್ ಆಯ್ಕೆಮಾಡಿ ಮತ್ತು ನೋಂದಣಿ ಸಂಖ್ಯೆಯನ್ನು ಮತ್ತು ಜನ್ಮ ದಿನಾಂವನ್ನು ಟೈಪ್ ಮಾಡಿ
ಹಂತ 4: ಕರ್ನಾಟಕ ಎಸ್ ಎಸ್ ಎಲ್ ಸಿ ಪಿಯುಸಿ ಫಲಿತಾಂಶ 2025 ಪರದೆಯ ಮೇಲೆ ಕಾಣಿಸುತ್ತದೆ
ಹಂತ 5: Karnataka.gov.in ನಲ್ಲಿ ಆನ್ ಲೈನ್ ಫಲಿತಾಂಶವನ್ನು ಸ್ಕೋರ್ ಕಾರ್ಡ್ ಪಿಡಿಎಫ್ ವೀಕ್ಷಿಸಿ ಮತ್ತು ಡೌನ್ ಲೋಡ್ ಮಾಡಿ
ಹಂತ 6: ಭವಿಷ್ಯದ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ