ತೆಕ್ಕಾರು: ತೆಕ್ಕಾರು ಬ್ರಹ್ಮಕಲಶದಲ್ಲಿ ಶಾಸಕ ಹರೀಶ್ ಪೂಂಜಾರವರು ನಡೆಸಿದ ಭಾಷಣ ಸ್ಥಳೀಯ ಮುಸಲ್ಮಾನ ಭಾoದವರಿಗೆ ನೋವುಂಟು ಮಾಡಿದ್ದು ಈ ಹಿನ್ನಲೆ ವಿಷಾದ ವ್ಯಕ್ತಪಡಿಸಿ ಎರಡು ದಿನಗಳ ಹಿಂದೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿ ತನ್ನ ಅಧಿಕೃತ ಲೆಟರ್ ಹೆಡ್ ನಲ್ಲಿ ವಿಷಾದ ವ್ಯಕ್ತಪಡಿಸಿ ಸ್ಥಳೀಯ ಮುಸ್ಲಿಂ ಒಕ್ಕೂಟಕ್ಕೆ ಪತ್ರ ಬರೆದಿತ್ತು.
ಇದೀಗ ಪತ್ರ ಬರೆದ ಬೆನ್ನ ಹಿಂಬದಿಯಲ್ಲೇ ದೇವಸ್ಥಾನ ಸಮಿತಿ ತಿರುಗಿ ಬಿದ್ದಿದೆ.

ಇಂದು ದೇವಸ್ಥಾನದಲ್ಲಿ ನಡೆದ ಭಜರಂಗದಳ ಮತ್ತು ದೇವಸ್ಥಾನ ಆಡಳಿತ ಸಮಿತಿಯ ಸಭೆಯಲ್ಲಿ ಶಾಸಕರ ಮಾತಿಗೆ ನಾವು ಬದ್ಧರಾಗಿದ್ದೇವೆ ದೇವಸ್ಥಾನ ಸಮಿತಿ ಯಾವುದೇ ವಿಷಾದ ವ್ಯಕ್ತಪಡಿಸಿಲ್ಲ ಎಂದಿದ್ದಾರೆ.
ಸ್ಥಳೀಯ ಮುಸ್ಲಿಂ ಮುಖಂಡರನ್ನು ಕರೆಸಿ ನಾವು ಸೌಹಾರ್ದ ಮಾತುಕತೆ ನಡೆಸಿಲ್ಲ ಎಂದಿದ್ದಾರೆ.
ಯಾರಾದರೂ ಈ ಬಗ್ಗೆ ಮಾತಾಡಿದ್ದರೆ ಅದು ಅವರ ವ್ಯಯಕ್ತಿಕ ಅದು ಬಿಟ್ಟು ದೇವಸ್ಥಾನ ಸಮಿತಿಯ ಹೇಳಿಕೆಯಲ್ಲ ಎಂದಿದ್ದಾರೆ.
ಶಾಂತಿ ಸೌಹಾರ್ದತೆಯಿಂದಯಿದ್ದ ಊರಿಗೆ ಶಾಸಕ ಹರೀಶ್ ಪೂಂಜಾರಾತ್ರಿ ಭಾಷಣದಿಂದ ದಕ್ಕೆ ಬಂದಿದ್ದು ಶಾಸಕರ ನಿಲುವನ್ನು ಖಂಡಿಸಿ ಮುಸ್ಲಿಂ ಒಕ್ಕೂಟ ದೇವಸ್ಥಾನ ಆಡಳಿತ ಸಮಿತಿಗೆ ಪತ್ರ ಬರೆದಿತ್ತು.

ಆ ಪತ್ರಕ್ಕೆ ಎರಡು ದಿನಗಳ ಮುಂಚೆಯಷ್ಟೇ ಬರಹ ಮೂಲಕವೇ ದೇವಸ್ಥಾನ ಸಮಿತಿ ಪ್ರತಿಕ್ರಿಯಿಸಿತ್ತು.
ಇದೀಗ ಆ ಪತ್ರ ವೈರಲ್ ಆಗುತ್ತಿದ್ದಂತೆ ಇದಕ್ಕೂ ದೇವಸ್ಥಾನಕ್ಕೆ ಸಂಬಂಧವಿಲ್ಲ ಎಂದು ಆಡಳಿತ ಸಮಿತಿ ಸಭೆ ನಡೆಸಿ ತಿಳಿಸಿದ್ದಾಗಿ ತಿಳಿದು ಬಂದಿದೆ.
ಸೌಹಾರ್ದತೆಯ ಊರು ಶಾಂತಿಯತ್ತ ಮುಖಮಾಡುವಾಗಲೇ ದೇವಸ್ಥಾನದ ಈ ನಿಲುವು ಸ್ಥಳೀಯ ಮುಸಲ್ಮಾನರನ್ನು ಕೆರಳಿಸಿದೆ.