';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಗಾರಪೇಟೆ : ಯುವತಿಯೊಂದಿಗೆ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಈಗ ತಲೆ ಮರೆಸಿಕೊಂಡಿರುವ ತಾಲೂಕಿನ ಹುನ್ಕುಂದ ಗ್ರಾಮ ಲೆಕ್ಕಾಧಿಕಾರಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಗ್ರಾಮ ಲೆಕ್ಕಾಧಿಕಾರಿ ಅವಿನಾಶ ಕಾಂಬ್ಳೆ ಎಂಬುವವನು ಈ ಹಿಂದೆ ಕೆಜಿಎಫ್ ರಾಬರ್ಟ್‌ಸನ್ ಪೇಟೆ ನಾಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯುವತಿಯೊಬ್ಬಳ ಜತೆ ಸ್ನೇಹ ಬೆಳಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿದ್ದನು ಎನ್ನಲಾಗಿದೆ.
ವಿಷಯ ತಿಳಿದ ಯುವತಿ ಪೋಷಕರು ಗಲಾಟೆ ಮಾಡಿದಾಗ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದಾನೆ. ಅದರಂತೆ ಆಗಸ್ಟ್ 27 ರಂದು ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಲ್ಲಿ ಮದುವೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವಿನಾಶ ಕಾಂಬ್ಳೆ ಬಾರದೆ ಕೈಕೊಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಯುವತಿ ಪೊಲೀಸರಿಗೆ ದುರು ನೀಡಿದ್ದಾಳೆ.