dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಇಲ್ಲಿನ ಬಿರುಮಲೆ ಬೆಟ್ಟದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಮತ್ತೊಮ್ಮೆ ಸಾಬಿತಾಗಿದೆ. ದಿನೇದಿನೇ ಜೋಡಿಹಕ್ಕಿಗಳ ಅನೈತಿಕ ವರ್ತನೆ, ಪ್ರಣಯದಾಟಗಳು ಇಲ್ಲಿ ಹೆಚ್ಚುತ್ತಿದ್ದು, ಸಾರ್ವಜನಿಕರಿಗೆ ಅಸಹ್ಯ ಹುಟ್ಟುವಂತೆ ಮಾಡಿದೆ. ಮಾದಕವಸ್ತುಗಳ ಸೇವನೆ, ವೇಶ್ಯಾವಾಟಿಕೆ, ಚುಡಾಯಿಸುವಿಕೆ ಮುಂತಾದ ಅಪರಾಧಿ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಕೆಲವರು ದೂರಿದ್ದಾರೆ.

ಪುತ್ತೂರಿನ ಬಿರುಮಲೆ ಬೆಟ್ಟವೆಂದರೆ ಇಡೀ ರಾಜ್ಯದಲ್ಲಿ ಹೆಸರು ಪಡೆದಿದ್ದು, ಇಲ್ಲಿಗೆ ರಾಜ್ಯದ ಕೆಲವು ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ಕೆಲವೊಂದು ಮಂದಿ ಈ ಬೆಟ್ಟವನ್ನು ಅನೈತಿಕ ಚಟುವಟಿಕೆಗಳಿಗಾಗಿಯೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಏಕಾಂತ ಬಯಸುವ ಪ್ರೇಮಿಗಳು ನಿರ್ಜನ ಪರಿಸರದತ್ತ ಚಿತ್ತ ಹರಿಸುತ್ತಾರೆ. ನಿನ್ನೆಯೂ ಕೂಡ ಪ್ರೇಮಿಗಳಿಬ್ಬರು ಇಲ್ಲಿ ಪ್ರಣಯದಲ್ಲಿ ತೊಡಗಿದ್ದರು. ಇದನ್ನು ನೋಡಿದ ಸ್ಥಳೀಯರೊಬ್ಬರು ಎಚ್ಚರಿಕೆ ನೀಡಿದ ಬಳಿಕ ಪ್ರೇಮಿಗಳು ಸ್ಥಳದಿಂದ ಕಾಳ್ಕಿತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>

ಈ ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಅರ್ಧ ಪುತ್ತೂರು ಕಾಣುತ್ತದೆ. ಆದರೆ ಕೆಲವೊಮ್ಮೆ ಬಿರುಮಲೆ ಬೆಟ್ಟಕ್ಕೆ ಕಣ್ಣು ಹಾಯಿಸಿದರೆ ಬೇರೆಯದ್ದೆ ಕಾಣುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಕೆಟ್ಟ ಕೆಲಸಗಳು ನಡೆಯುತ್ತಿದ್ದು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಇದು ತೊಂದರೆಯನ್ನುಂಟು ಮಾಡುತ್ತಿದೆ. ಈ ಬಗ್ಗೆ ಪೊಲೀಸರು ಎಚ್ಚರವಹಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!