ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ತಲೆ ಕೂದಲಿಗೆ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ. ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸುಮಾರು 45 ಸೆಕೆಂಡುಗಳ ಕಾಲ ಆಕೆಗೆ ತನ್ನ ತಲೆ ಕೂದಲಿಗೆ ಬೆಂಕಿ ಹತ್ತಿಕೊಂಡಿರುವುದು ಗೊತ್ತೇ ಆಗಿಲ್ಲ.
This Lady is on Fire . #ViralVideo #Viral #fire #onfire pic.twitter.com/YOIFHpziZ3
— Prashant Sahu 🇮🇳 (@suryanandannet) September 19, 2021
ಮಹಿಳೆಗೆ ತನ್ನ ತಲೆ ಕೂದಲಿಗೆ ಬೆಂಕಿ ಆವರಿಸಿಕೊಂಡಿರುವುದು ಗೊತ್ತೇ ಆಗಿಲ್ಲ. ಸುಮಾರು 45 ಸೆಕೆಂಡುಗಳ ಕಾಲ ಆಕೆ ಅಡುಗೆ ಮನೆಯಲ್ಲಿ ಆಕಡೆ ,ಈಕಡೆ ಓಡಾಡುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಕಿ ತಲೆ ಕೂದಲಿಗೆ ಪೂರ್ತಿಯಾಗಿ ಆವರಿಸಿಕೊಳ್ಳುತ್ತಿದ್ದಂತೆಯೇ ಮಹಿಳೆ ಎಚ್ಚರಗೊಂಡಿದ್ದಾಳೆ. ಬಳಿಕ ಬೆಂಕಿ ನಂದಿಸಿದ್ದಾಳೆ. ಸೆಪ್ಟೆಂಬರ್ 16 ನೇ ತಾರೀಕಿನಂದು ಘಟನೆ ನಡೆದಿದೆ. ಆದರೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.