dtvkannada

ಕಲಬುರಗಿ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸಂಚಾರಿ ಠಾಣೆಯ ಎಎಸ್‍ಐ ಅವರ ಪುತ್ರ ಸಾವಿಗೀಡಾದ ಘಟನೆ ನಿನ್ನೆ ತಡ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.

ಕಲಬುರಗಿಯ ಕುಸನೂರ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದ ಈ ಘಟನೆಯಲ್ಲಿ ಸಂಚಾರಿ ಠಾಣೆಯ ಎಎಸ್‍ಐ ಶ್ರೀಮಂತ್ ಅವರ ಮಗ ಸುನೀಲ್(28) ಸಾವನ್ನಪ್ಪಿದ್ದಾನೆ. ನಗರದಿಂದ ಕುಸನೂರ ರಸ್ತೆಯಲ್ಲಿರುವ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!