dtvkannada

ಪುತ್ತೂರು: ಪಿಕಪ್ ವಾಹನದ ಟಯರ್ ಸ್ಪೋಟಗೊಂಡು ಸರಣಿ ಅಪಘಾತ ಸಂಭವಿಸಿದ ಘಟನೆ ತಿಂಗಳಾಡಿ ಸಮೀಪದ ಕಟ್ಟತ್ತಾರು ಬಳಿ ನಡೆದಿದೆ.
ಪಿಕಪ್, ಜೀಪು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಗಾಯಗೊಂಡ ಬಗ್ಗೆ ವರದಿಯಾಗಿದೆ.



ತಿಂಗಳಾಡಿ ಕಡೆಯಿಂದ ಮಾಡಾವು ಕಡೆ ಸಂಚರಿಸುತ್ತಿದ್ದ ಜೀಪು ಕಟ್ಟತ್ತಾರು ತಿರುವು ಬಳಿ ಸಮೀಪಿಸುತ್ತಿದ್ದಂತೆ ಟೈರ್ ಸ್ಪೋಟಗೊಂಡಿದೆ. ಬಳಿಕ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಪಿಕಪ್ ವಾಹನ ಮತ್ತು ಬೈಕ್ ಗೆ ಡಿಕ್ಕಿ ಹೊಡೆದಿದೆ.



ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾನೆ. ಗಾಯಗೊಂಡವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!