dtvkannada

ಮಂಗಳೂರು: ನಗರದ ಕುದ್ರೋಳಿಯಲ್ಲಿ ಪತಿ ಜೊತೆ ವಾಸವಾಗಿದ್ದ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಪತ್ತೆಯಾಗಿದೆ.



ಮೃತ ಮಹಿಳೆಯನ್ನು ಸೂಫಿಯಾ ಬೇಗಂ ಎಂದು ಗುರುತಿಸಲಾಗಿದೆ. ಪತಿಯೊಂದಿಗೆ ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಕಳೆದ 5 ತಿಂಗಳಿನಿಂದ ಈಕೆ ವಾಸವಾಗಿದ್ದು, ಪತಿ ಪೈಂಟಿಂಗ್ ವೃತ್ತಿ ಮಾಡುತ್ತಿದ್ದರೆ ಈಕೆ ಮನೆ ವಾರ್ತೆ ನೋಡಿಕೊಳ್ಳುತ್ತಿದ್ದಳು.

ಗುರುವಾರ ರಾತ್ರಿ ಸೂಫಿಯಾ ಬೇಗಂ ಮತ್ತು ಅವರ ಪತಿ ಊಟ ಮಾಡಿ ಮಲಗಿದ್ದರು. ಶುಕ್ರವಾರ ಮುಂಜಾನೆ 4 ಗಂಟೆಗೆ ಎದ್ದು ದಂಪತಿ ಅಡುಗೆ ಕೆಲಸ ಮಾಡಿ ಮತ್ತೆ ಮಲಗಿದ್ದರು. ಪತಿ ಬೆಳಿಗ್ಗೆ 7.45ಕ್ಕೆ ಎಚ್ಚರವಾಗಿ ನೋಡಿದಾಗ ಪತ್ನಿ ಅದೇ ಕೋಣೆಯ ಕಿಟಕಿ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದರು.

ಪತಿ ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!