';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ದಾರಿ ಬಿಡಿ ಸಹೋದರರೆ ದಾರಿ ಬಿಡಿ
ಪುಣ್ಯ ಹಜ್ಜ್ ನಿರ್ವಹಿಸಲು ಹೋಗುತ್ತಿರುವೆ
ಮಕ್ಕಾ ತಲುಪಲು ಪ್ರಾರ್ಥನೆ ಮಾಡಿ
ದಾರಿ ಬಿಟ್ಟು ಸಹಕರಿಸಿ.
ದಾರಿ ಬಿಡಿ ಸಹೋದರರೆ ದಾರಿ ಬಿಡಿ
ನನ್ನ ನಿಯ್ಯತ್’ಗೆ ತಡೆ ಮಾಡಬೇಡಿ
ತಲುಪಬೇಕು ನನಗೆ ನನ್ನ ಗುರಿ
ದಾರಿ ಬಿಟ್ಟು ಸಹಕರಿಸಿರಿ.
ದಾರಿ ಬಿಡಿ ಸಹೋದರರೆ ದಾರಿ ಬಿಡಿ
ನನ್ನ ಕಾಲ್ನಡಿಗೆಗೆ ಗುಂಪುಗೂಡದೆಯೇ
ನನಗೆ ಪುಣ್ಯ ಮಕ್ಕಾವ ತಲುಪಲು
ದಾರಿ ಬಿಟ್ಟು ಸಹಕರಿಸಿ.
ದಾರಿ ಬಿಡಿ ಸಹೋದರರೆ ದಾರಿ ಬಿಡಿ
ತಲುಪಬೇಕು ನಾ ಬೆಟ್ಟ ಗುಡ್ಡಗಳ ದಾಟಿ
ಹಲವು ಹಳ್ಳಿ ನಗರಗಳ ದಾಟಿ
ದಾರಿ ಬಿಟ್ಟು ಸಹಕರಿಸಿರಿ.
ದಾರಿ ಬಿಡಿ ಸಹೋದರರೆ ದಾರಿಬಿಡಿ
ಬಿಸಿಲು ಮಳೆಯ ಲೆಕ್ಕಿಸದೆ
ಸಾಗಬೇಕು ನಾ ಸಾವಿರಾರು ಮೈಲುಗಳ
ದಾರಿ ಬಿಟ್ಟು ಸಹಕರಿಸಿ.
-ಸಿದ್ದೀಕ್ ಶನಿವಾರಸಂತೆ, ಕೊಡಗು