ಮಂಗಳೂರು: ಸದಾ ಕೋಮು ಗಲಭೆಗಳಿಂದ ತತ್ತರಿಸುವ ಬುದ್ಧಿವಂತರ ಜಿಲ್ಲೆಯಲ್ಲಿ ಈ ವಿದ್ಯಾರ್ಥಿಗಳ ಸೌಹಾರ್ದತೆ ಕೋಮು ವಿಷ ಬೀಜ ಬಿತ್ತುವವರ ಕಣ್ಣು ತೆರೆಯಲಿ.
ಕೊಣಾಜೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ನಿಶಾಳಿಗೆ ಕಲಿಕಾ ಕಾರ್ಯದಲ್ಲಿ ಅಸರೆಯಾಗುವುದು ಪ್ರೀತಿಯ ಗೆಳತಿ ಸೌಜನ್ಯ, ಸಮ್ರೀನಾ, ಫಾತಿಮತ್ ಸಫಿರಾ.
ಈ ವಿದ್ಯಾರ್ಥಿನಿಯು ದಿನನಿತ್ಯ ಶಾಲೆಗೆ ಬರಲು ಆಟೋ ವ್ಯವಸ್ಥೆ ಮಾಡುತ್ತಿರುವುದು ಶಾಲೆಯ ಮುಖ್ಯೋಪಾಧ್ಯಯರಾದ ರಾಜೇಶ್ ಸರ್ ರವರು.

ಹೌದು ಕಡು ಬಡತನದಲ್ಲಿ ಬೆಳೆದ ಫಾತಿಮತ್ ನಿಶಾ ಹುಟ್ಟು ಅಂಗವಿಕಲೆ ಕೈಕಾಲು ಬಲಹೀನತೆಗೆ ಒಳಗಾಗಿರುವ ನಿಷಾಳಿಗೆ ಕಲಿಯ ಬೇಕೆಂಬ ಹುಚ್ಚು.
ಆದರೆ ಅಂಗವಿಕಲಳಾದ ನಿಶಾಳಿಗೆ ಎದ್ದು ನಡೆದಾಡಲು ಕೂಡ ಸಾಧ್ಯವಿಲ್ಲ. ವೀಲ್ ಚಯರ್ ನಲ್ಲೆ ಜೀವನ ದೂಡುತ್ತಿದ್ದಾಳೆ ಈ ಹೆಣ್ಣು ಮಗಳು ಕಲಿತು ದೊಡ್ಡ ಡಾಕ್ಟರ್ ಆಗಬೇಕೆಂಬ ನಿಶಾಲ ಆಸೆಗೆ ಜತೆಯಾಗುತ್ತಿರುವುದು ಶಾಲೆಯಲ್ಲಿ ಕಲಿಯುತ್ತಿರವ ಇತರೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು. ಇವರ ಪ್ರೀತಿ, ಸೌಹಾರ್ದತೆಯನ್ನು ನೋಡಬೇಕಾದರೆ ಕೊಣಾಜೆ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಲೇಬೇಕು.
ತಂದೆಯಿಲ್ಲದ ಹೆಣ್ಣು ತನ್ನ ತಾಯಿಯೂ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾರೆ ಅದರ ಮದ್ಯೆ ಅಂಗವಿಕಲಲಾದ ನಿಶಾಳಿಗೆ ಏನಾದರೂ ಸಾಧಿಸಬೇಕೆಂಬ ಹಂಬಲ ಬೇರೆ ಆದರೆ ಮನೆಯಿಂದ ದೂರದಲ್ಲಿರುವ ಶಾಲೆಗೆ ಹೋಗಬೇಕಾದರೆ ಆಟೋ ರಿಕ್ಷಾದಲ್ಲೇ ಸಂಚರಿಸಬೇಕು.
ಮನೆಯ ಬಡತನ ಅರಿತ ಶಾಲಾ ಶಿಕ್ಷಕಿ ವೀಣಾ ಮೇಡಂ ರವರು ಪ್ರತಿನಿತ್ಯ ಆಟೋದ ಬಾಡಿಗೆಯನ್ನು ನೀಡುತ್ತಿದ್ದರು ಅವರ ವರ್ಗಾವಣೆ ನಂತರ ಮುಖ್ಯೋಪಾದ್ಯರಾದ ರಾಜೇಶ್ ರವರೇ ಸ್ವತಃ ಕೈಯಿಂದಲೇ ನೀಡುತ್ತಿದ್ದಾರೆ ಎನ್ನುತ್ತಾಳೆ ನಿಶಾ.
ಬೆಳಗ್ಗೆ ರಿಕ್ಷಾದಿಂದ ನಿಶಾಳನ್ನು ಎತ್ತಿ ವೀಲ್ ಚಯರ್ ಗೆ ಇರಿಸಿ ತರಗತಿಗೆ ಕರೆದುಕೊಂಡು ಕೂರಿಸುತ್ತಾರೆ ಅವಳ ಸ್ನೇಹಿತರಾದ ಸೌಜನ್ಯ, ಸಮ್ರೀನಾ ಮತ್ತು ಫಾತಿಮತ್ ಸಫಿರಾ.
ಪ್ರತಿನಿತ್ಯವೂ ನಿಶಾ ಮನೆಗೆ ಹೋದ ನಂತರವೇ ಇವರು ಇವರ ಮನೆಯ ಹಾದಿಯನ್ನು ಸಾಗುವುದು.
ತರಗತಿಯಲ್ಲಿ ಕಲಿಯುವುದರಲ್ಲಿ ಪ್ರಥಮ ಸ್ಥಾನಿಯಾಗಿರುವ ನಿಶಾಲ ಜೀವನ ಅದ್ಭುತವಾದದ್ದು ಅವಳ ಚಲಕ್ಕೆ ನಮ್ಮ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದೇವೆ, ಸಾಧನೆಯ ಛಲ ಅವಳಿಗಿದೆ ಎನ್ನುತ್ತಾರೆ ಶಾಲಾ ಮುಖ್ಯೋಪಾದ್ಯರಾದ ರಾಜೇಶ್ ರವರು.
ಕಡು ಬಡತನದಲ್ಲಿ ಬೆಳೆದು ಜೀವನದಲ್ಲಿ ವೈದ್ಯ ಆಗಬೇಕೆಂಬ ಕನಸು ಕಟ್ಟಿರುವ ನಿಷಾಳಿಗೆ ಅದು ಸಾಧ್ಯವಾಗಲಿ ಎಂದಷ್ಟೇ ಹಾರೈಸುತ್ತೇವೆ.
ಅವಳ ಕಲಿಕೆಗೆ ಬೆನ್ನೆಲುಬಾಗುತ್ತಿರುವ ಅವಳ ಸ್ನೇಹಿತರ ಶ್ರಮವನ್ನು ಮೆಚ್ಚಲೇಬೇಕು.
ಸಾಧ್ಯವಾಗುವವರು ನಿಶಾಲ ಸಂಕಷ್ಟಕ್ಕೆ ಜತೆಯಾಗಿ ಎಂದು ಮನವಿ ಮಾಡುತ್ತಿದ್ದೇವೆ.
ಫಾತಿಮತ್ ನಿಶಾ, ಬ್ಯಾಂಕ್ ಆಫ್ ಬರೋಡ.
ಕೊಣಾಜೆ ಬ್ರಾಂಚ್.
ಖಾತೆ ನಂ:- 84700100012451



