ದೇಶದ ಪ್ರಗತಿ ಪ್ರಜೆಗಳ ಸಕಾರಾತ್ಮಕ ಮತ್ತು ಸಹಕಾರಾತ್ಮಕ ಪ್ರೇರಣೆಯಿದ್ದರೆ ಸಾಧ್ಯ
ಅಮಿರ್ ಅಶ್ ಅರೀ ಬನ್ನೂರು ರವರ ಸ್ವಾತಂತ್ರ್ಯ ದಿನದ ವಿಶೇಷ ಬರಹ
ಬ್ರಿಟಿಷ್ ಚಕ್ರಾಧಿಪತ್ಯದಿಂದ ನಿರಾಳತೆಯತ್ತ ಭಾರತೀಯ ಜನಸಾಮಾನ್ಯರ ಬದುಕನ್ನು ದಾಟಿಸಲು ಘಟಿಸಿದ ಸ್ವಾತಂತ್ರ್ಯಕ್ಕೆ ಎಪ್ಪತ್ತೇಳರ ಸಂಭ್ರಮ.1857ರಲ್ಲಿ ಬ್ರಿಟಿಷರ ವಿರುದ್ಧ ದೇಶಪ್ರೇಮದ ಎದೆಯುಬ್ಬಿಸಿ ನಿಂತ ಭಾರತೀಯ ಸೇನಾನಿಗಳಿಂದ ಹಿಡಿದು 1947 ಆಗಸ್ಟ್ 15ರ ಮಧ್ಯರಾತ್ರಿ ಕೆಂಪು ಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವವರೆಗೆ ತಲುಪುವ…