ಬೆಂಗಳೂರು: ದೇಶದಾದ್ಯಂತ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇದೊಂದು ಆತಂಕಾರಿ ಬೆಳವಣಿಗೆಯಾಗಿದೆ.
ಆದರೂ ಯಾರು ಈ ಬಗ್ಗೆ ತಲೆ ಕೆಡಿಸಿದ್ದು ಕಡಿಮೆ, ಬೆಂಗಳೂರಿನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಾವು ಕುಳಿತ ಸೀಟ್ ನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಕೇರಳದಿಂದ ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದಿದ್ದ 61 ವರ್ಷದ ಅಬ್ದುಲ್ ಖಾದರ್ ಅವರಿಗೆ ಬಸ್ ನಲ್ಲಿಯೇ ಹಾರ್ಟ್ ಅಟ್ಯಾಕ್ ಆಗಿದೆ.
ಅಬ್ದುಲ್ ಖಾದರ್ ಅವರು ಯಶವಂತಪುರ ರೈಲ್ವೇ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ತೆರಳಲು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.
ಬಸ್ ಮಂತ್ರಿ ಮಾಲ್ ಬಳಿ ತೆರಳುತ್ತಿದ್ದ ವೇಳೆ ಅಬ್ದುಲ್ ಖಾದರ್ ಅವರು ಇದ್ದಕ್ಕಿದ್ದಂತೆ ತಾವು ಕುಳಿತಿದ್ದ ಸೀಟ್ ಮೇಲೆಯೇ ಕುಸಿದು ಬಿದ್ದಿದ್ದಾರೆ.
ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಬಸ್ ನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ.