ಸೌದಿ ಅರೇಬಿಯಾ: ಲಾರಿ ಮತ್ತು ಕಾರು ಅಪಘಾತ ಪ್ರಕರಣದಲ್ಲಿ ನಾಲ್ವರು ಸೌದಿ ಪ್ರಜೆಗಳು ಸಾವನ್ನಪ್ಪಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಲು ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು 2 ಕೋಟಿ ರೂಪಾಯಿ ಪಾವತಿಸಿ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.
ಅವದೇಶ್ ಸಾಗರ್ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದು ಇದೀಗ ಭಾರತದ 2 ಕೋಟಿ ರೂಪಾಯಿಯನ್ನು ನೀಡಿ ಭಾರತೀಯ ಚಾಲಕನನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.
ಉತ್ತರಪ್ರದೇಶದ ಜಾನ್ಪುರದ ಮೂಲದವರಾಗಿದ್ದ ಅವದೇಶ್ ಕಾರು ಅಪಘಾತ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದರೆಂದು ತಿಳಿದು ಬಂದಿದೆ.
ಸೌದಿ ಪ್ರಜೆಯ ಉದಾರ ಮನಸ್ಸಿನಿಂದ ಮೂರು ವರ್ಷಗಳ ನಂತರ ಅವದೇಶ್ ಹೊರ ಪ್ರಪಂಚವನ್ನು ಮತ್ತು ತಮ್ಮ ಕುಟುಂಬದವರನ್ನು ನೋಡುವಂತಾಗಿದೆ.
ಇವರ ಬಿಡುಗಡೆಗಾಗಿ ಹಾದಿ ಹಮೂದ್ ಖೈತಾನಿ ಎಂಬ ಸೌದಿ ವ್ಯಕ್ತಿ ಶ್ರಮಿಸಿದ್ದ ಮಾನವಿಯ ವ್ಯಕ್ತಿಯಾಗಿದ್ಧು ಅವದೇಶ್ ಅವರ ವಾಹನವು ಮಾರ್ಚ್ 13, 2020 ರಂದು ಅಪಘಾತಕ್ಕೀಡಾಯಿತು. ಅವದೇಶ್ ಕುಮಾರ್ ಚಲಾಯಿಸುತ್ತಿದ್ದ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 4 ಸೌದಿ ಪ್ರಜೆಗಳು ಆಂದು ಸಾವನ್ನಪ್ಪಿದ್ದು ಇದರಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ವಿಕಲಚೇತನ ವ್ಯಕ್ತಿ ಸೇರಿಕೊಂಡಿದ್ದರು.
ಶಿಕ್ಷೆಗೊಳಗಾದ ಅವದೇಶ್ನನ್ನು ರಿಯಾದ್ನ ತೈಫ್ ರಸ್ತೆಯಲ್ಲಿರುವ ಅಲ್ ಕುವೈಯಾ ವಿಲೇಜ್ ಜೈಲಿಗೆ ವರ್ಗಾಯಿಸಿದ್ದು ತದನಂತರ ನ್ಯಾಯಾಲಯವು 945,0000 ರಿಯಾಲ್ಗಳನ್ನು (ಸುಮಾರು 2 ಕೋಟಿ ರೂಪಾಯಿ) ದಯಾ ಅಥವಾ ರಕ್ತದ ಹಣವಾಗಿ ಪಾವತಿಸಬೆಕೆಂದು ಖಡಕ್ ಆದೇಶ ಹೊರಡಿಸಿತು.
ಆದರೆ ಅಷ್ಟು ಹಣ ಕೊಡುವ ಸಾಮರ್ಥ್ಯ ಅವದೇಶ್ ಅವರಿಗಿರಲಿಲ್ಲ ಆದ್ದರಿಂದ ಶಿಕ್ಷೆಯನ್ನು ತಾನೇ ಅನುಭವಿಸಲು ನಿರ್ಧರಿಸಿದರು. ನಂತರ ಪ್ರಕರಣದ ವಿಷಯ ತಿಳಿದ ಹಾದಿ ಹಮೂದ್ ಖೈತಾನಿ ಅವದೇಶ್ರವರು ಅವದೇಶ್ನನ್ನು ಬಿಡಿಸಲು ಪ್ರಯತ್ನಗಳನ್ನು ಆರಂಭಿಸಿ ಕೊನೆಗೂ ಎರಡು ಕೋಟಿ ರೂಪಾಯಿ ಪಾವತಿಸಿ ಜಾತಿ, ಧರ್ಮ,ದೇಶ, ವ್ಯಕ್ತಿ ಯಾವುದನ್ನು ನೋಡದೆ ಮಾನವಿಯತೆಯನ್ನು ಎತ್ತಿ ಹಿಡಿದುಕೊಂಡು ಅವದೇಶ್ ಗೆ ಮುಕ್ತಿ ಸಿಗುವಂತೆ ಮಾಡಿದ್ದಾರೆ.