ಪುತ್ತೂರು: ರಾಜ್ಯ ವಿಧಾನಸಭಾ ಚುಣಾವನೆಗೆ ಇನ್ನೇನೂ ಕ್ಷಣಗಣೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಪ್ರಾರಂಭವಾಗಿದೆ. ಇತ್ತ ದಕ್ಷಿಣ ಕನ್ನಡದ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಕೆಪಿಸಿಸಿಗೆ ಕಗ್ಗಂಟಾಗಿ ಉಳಿದಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಒಟ್ಟು ಹದಿನಾಲ್ಕು ಮಂದಿ ಅಭ್ಯರ್ಥಿ ಸ್ಥಾನಕ್ಕಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಅಂತಿಮ ಮೂವರ ಹೆಸರನ್ನು ಕೆಪಿಸಿಸಿ ಎಐಸಿಸಿಗೆ ರವಾನಿಸಿದ್ದು, ಅದರಲ್ಲಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಕಳೆದ ತಿಂಗಳು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾದ ಅಶೋಕ್ ರೈ ಕೂಡ ಸ್ಥಾನ ಪಡೆದಿದ್ದಾರೆ ಅನ್ನುವ ಮಾಹಿತಿ ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬ್ಲಾಕ್ ನ ಮಾಜಿ ಅಧ್ಯಕ್ಷರು, ಕೆಪಿಸಿಸಿ ಸಂಯೋಜಕರೂ ಆಗಿರುವ ಕಾವು ಹೇಮನಾಥ್ ಶೆಟ್ಟಿಯವರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರ ಕೂಗೂ ಕೂಡ ಹೆಚ್ಚಾಗಿತ್ತು, ಕಾರ್ಯಕರ್ತರ ಮನಮಾತನ್ನು ಅರ್ಥೈಸಿರುವ ಕಾಂಗ್ರಸ್ ಪಕ್ಷವು ಅಂತಿಮ ಪಟ್ಟಿಯಲ್ಲಿ ಹೇಮನಾಥ್ ಶೆಟ್ಟಿಯವರ ಹೆಸರನ್ನು ಭದ್ರವಾಗಿರಿಸಿದೆ.

ಹಲವು ವರ್ಷಗಳಿಂದ ಪಕ್ಷಕ್ಕಾಗಿ ತನು ಮನ ಧನಗಳಿಂದ ದುಡಿದಿದ್ದ ಕಾವು ಹೇಮನಾಥ ಶೆಟ್ಟಿಯವರಿಗೆ ಇದುವರೆಗೂ ಪಕ್ಷದಲ್ಲಿ ಉನ್ನತ ಹುದ್ದೆ ಸಿಕ್ಕಿಲ್ಲ. ಕಳೆದ ಹಲವು ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನಕ್ಕಾಗಿ ಕಡೇ ಕ್ಷಣದವರೆಗೂ ಇವರ ಹೆಸರು ಇತ್ತಾದರೂ, ಅಂತಿಮ ಕ್ಷಣದಲ್ಲಿ ಇತರ ಅಭ್ಯರ್ಥಿಗಳು ಬಿ ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದರು.ಆದರೂ ಇದ್ಯಾವುದಕ್ಕೂ ಎದೆಗುಂದದೆ ಪಕ್ಷಕ್ಕಾಗಿ ನಿರಂತರ ಸೇವೆಗೈಯುತ್ತಾ ನಿಷ್ಟಾವಂತ ನಾಯಕನಾಗಿ ದುಡಿದಿದ್ದ ಇವರ ಬಗ್ಗೆ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಇವರ ಮೇಲೆ ಒಲವು ತೋರಿದೆ ಎನ್ನಲಾಗಿದೆ.

ಅಧಿಕಾರ ಇಲ್ಲದಿದ್ದರೂ, ಕಾರ್ಯಕರ್ತರ ಜೊತೆಗಿನ ಒಡನಾಟ, ಪಕ್ಷಕ್ಕಾಗಿನ ದುಡಿಮೆ, ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗಿನ ನಿಕಟ ಸಂಬಂಧ ಇದರ ಜೊತೆಗೆ ಇಲ್ಲಿನ ಬಹುಸಂಖ್ಯಾತ ಹಿಂದೂ ಸಹೋದರ ಸಹೋದರಿಯರ ಮತ್ತು ಅಲ್ಪಸಂಖ್ಯಾತ ಸಹೋದರ ಸಹೋದರಿಯರ ಒಲವು, ಇವೆಲ್ಲವು ಈ ಬಾರಿ ಇವರಿಗೆ ಅವಕಾಶ ಸಿಕ್ಕರೆ ಇವರಿಗೆ ಇದೆಲ್ಲವು ವರದಾನವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಅದೇ ರೀತಿ ಮಾಜಿ ಶಾಸಕಿಯು ಈ ಬಾರಿ ಚುಣಾವನೆಯಲ್ಲಿ ಸ್ಪರ್ದಿಸಲು ಅಷ್ಟೇನು ಒಲವು ತೋರದಿದ್ದರು ಪಕ್ಷವು ಅವರ ಹೆಸರನ್ನು ಕೈಬಿಟ್ಟಿಲ್ಲ ಮತ್ತು ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಅಶೋಕ್ ರೈವರು ಸೆರ್ಪಡೆಗೊಂಡ ನಂತರ ತನ್ನನ್ನು ತಾನು ಪಕ್ಷಕ್ಕಾಗಿ ಮೀಸಲಿಡುತ್ತಿದ್ದು ಬಹುಶ ಇವರನ್ನು ಗುರುತಿಸಿಕೊಂಡಿರುವ ಪಕ್ಷವು ಮುಂದಕ್ಕೆ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನ ನೀಡಿದರು ಅಚ್ಚರಿಯಿಲ್ಲ. ಮುಂದಕ್ಕೆ ಇದೇ ರೀತಿ ನಡೆಯಿತು ಎಂದಾದರೆ ಡಿಟಿವಿಯ ಸಮೀಕ್ಷೆಯಂತೆ ಈ ಮೂವರಲ್ಲಿ ಕಾವು ಹೇಮನಾಥ್ ಶೆಟ್ಟಿಯವರ ಹೆಸರು ಫೈನಲ್ ಆಗಲಿದೆ ಆದರೂ ಇಂತಹ ಸಂದರ್ಭದಲ್ಲಿ ಕಾದು ನೋಡುವುದು ಒಳಿತು…