ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಸುಳ್ಯ ಕಡೆಯಿಂದ ಬಂದ ತಮಿಳುನಾಡು ರಿಜಿಸ್ಟರ್ಡ್ ಲಾರಿಯೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಪೆ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಘಟನೆ ಇದೀಗ ನಡೆದಿದೆ.

ಲಾರಿಚಾಲಕ ಡ್ರಿಂಕ್&ಡ್ರೈವ್ ಮಾಡಿ ಈ ಅಪಘಾತವೆಸಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಪಘಾತವೆಸಗಿದ ಚಾಲಕ ತನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಮುಂದಕ್ಕೆ ಚಲಾಯಿಸಿದ್ದು ತಕ್ಷಣ ಎಚ್ಚೆತ್ತುಕೊಂಡ ನಾಗರಿಕರು ಲಾರಿಯನ್ನು ತಡೆ ಹಿಡಿದು ರಸ್ತೆ ಬದಿ ನಿಲ್ಲಿಸಿದ್ದಾರೆ.


ಮದ್ಯಪಾನ ಸೇವಿಸಿ ಈ ರೀತಿ ಘಟನೆ ನಡೆದಿದ್ದನ್ನರಿತ ನಾಗರಿಕರು ಚಾಲಕನನ್ನು ತರಾಟೆಗೆ ಎತ್ತಿಕೊಂಡಿದ್ದು ಕೊನೆಗೆ ಅಲ್ಲಿ ಸೇರಿರುವ ಯುವಕರು ಬುದ್ದಿಮಾತನ್ನು ಹೇಳಿ “ಯಾವುದೇ ಕಾರಣಕ್ಕೂ ಇಂದು ನೀನು ಲಾರಿ ಚಲಾಯಿಸುವಂತಿಲ್ಲ, ಚಲಾಯಿಸಿದ್ದಲ್ಲಿ ದೊಡ್ಡ ಅಪಘಾತ ಸಂಭವಿಸುವುದರಲ್ಲಿ ಸಂಶಯವಿಲ್ಲ” ಎನ್ನುವ ಮಾತು ಹೇಳುತ್ತಾ ಸಂಪ್ಯ ಠಾಣಾ ಪೊಲೀಸರಿಗೆ ಕರೆ ಮಾಡಿದ್ದಾರೆ.
ತಕ್ಷಣ ಧಾವಿಸಿ ಬಂದ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಲಾರಿಯನ್ನು ವಶಕ್ಕೆ ಪಡೆದ ಬಗ್ಗೆ ಮಾಹಿತಿ ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.