dtvkannada

'; } else { echo "Sorry! You are Blocked from seeing the Ads"; } ?>

ಪ್ರಕೃತಿ ವಿಪತ್ತುಗಳು ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವುಗಳು ಸಂಭವಿಸಿದಾಗ ನಮ್ಮ ಪ್ರಾಣ ರಕ್ಷಣೆಗಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತೇವೆ. ಇದೇ ರೀತಿ ಸೋಮವಾರ (ಮಾ.21) ರಾತ್ರಿ ಉತ್ತರ ಭಾರತ ಮತ್ತು ದಕ್ಷಿಣ ಏಷ್ಯಾದ ಹಲವಾರು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಹಲವಾರು ನಗರಗಳ ನಿವಾಸಿಗಳು ಭೂಕಂಪನದ ಸಮಯದಲ್ಲಿ ಮನೆಗಳನ್ನು ತೊರೆದು ತಮ್ಮ ಪ್ರಾಣ ರಕ್ಷಣೆಯ ಸಲುವಾಗಿ ತೆರೆದ ಪ್ರದೇಶಗಳಿಗೆ ಓಡಿ ಹೋಗುತ್ತಾರೆ.
ಆದರೆ ಈ ಭೂಕಂಪನದ ಸಮಯದಲ್ಲಿ ಕಾಶ್ಮೀರದ ಆಸ್ಪತ್ರೆಯೊಂದರ ವೈದ್ಯರ ಗುಂಪೊಂದು ಆಪರೇಷನ್ ಥೀಯೆಟರ್‌ನಲ್ಲಿ ಧೈರ್ಯದಿಂದ ಮಹಿಳೆಯೊಬ್ಬರಿಗೆ ಸಿ ಸೆಕ್ಷನ್ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತಾಯಿಯ ಗರ್ಭದಿಂದ ಮಗುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಕಾಶ್ಮೀರದ ಅನಂತನಾಗ್ ಜಿಲ್ಲಾ ಆರೋಗ್ಯ ಇಲಾಖೆಯು ಈ ಆಪರೇಷನ್ ಕೊಠಡಿಯಲ್ಲಿ ತೆಗೆದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಭೂಕಂಪದ ನಡುಕದ ಸಮಯದಲ್ಲಿ ವೈದ್ಯರು ಮತ್ತು ಅವರ ಸಿಬ್ಬಂದಿಗಳು ತಮ್ಮ ಪ್ರಾಣದ ಹಂಗು ತೊರೆದು ಶಸ್ತ್ರಚಿಕಿತ್ಸೆಯನ್ನು ನಡೆಸುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಜೊತೆಗೆ ವೈದ್ಯಕೀಯ ಉಪಕರಣಗಳು, ಓವರ್‌ಹೆಡ್ ಲೈಟ್‌ಗಳು, ಮಾನಿಟರ್, ಐವಿ ಡ್ರಿಪ್ ಹಾಗೂ ಸ್ಟ್ಯಾಂಡ್​ಗಳು ಭೂಕಂಪನದಿಂದ ಅಲುಗಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

'; } else { echo "Sorry! You are Blocked from seeing the Ads"; } ?>

ವೈದ್ಯರೊಬ್ಬರು ಬೇಬಿ ಕೋ ತೀಕ್ ರಖನಾ… (ಮಗುವನ್ನು ಸುರಕ್ಷಿತವಾಗಿರಿಸಿಕೊಳ್ಳಿ) ಎಂದು ಹೇಳುವುದನ್ನು ಕೇಳಬಹುದು. ಈ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಭೂಕಂಪನದಿಂದ ಯಾವುದೇ ತೊಂದರೆ ಆಗದಿರಲಿ ಎಂದು ಪ್ರಾರ್ಥಿಸುವುದನ್ನು ಕೇಳಬಹುದು. ಈ ಸಮಯದಲ್ಲಿ ಇದ್ದಕ್ಕಿದಂತೆ ವಿದ್ಯುತ್ ಕಡಿತದಿಂದ ಆಪರೇಷನ್ ಥೀಯೆಟರ್ ಕತ್ತಲೆಯಿಂದ ಮುಳುಗಿ ಹೋಗುತ್ತದೆ. ಆಗ “ಲಾಹಿಲಾಹ ಇಲ್ಲಲ್ಲಾಹ್” “ಲಾಹಿಲಾಹ ಇಲ್ಲಲ್ಲಾಹ್’ ಎಂದು ದೇವರಲ್ಲಿ ಪ್ರಾರ್ಥಿಸುವುದನ್ನು ಕಾಣಬಹುದು.

— CMO Anantnag Official (@cmo_anantnag) March 21, 2023

ವಿದ್ಯುತ್ ಕಡಿತವು ಕೆಲವು ಸೆಕೆಂಡುಗಳವರೆಗೆ ಇರುತ್ತದೆ. ನಂತರ ಕಂಪನ ಕಡಿಮೆಯಾಗುತ್ತಿದ್ದಂತೆ ಕರೆಂಟ್ ಬರುತ್ತದೆ. ದೀಪಗಳು ಉರಿಯುತ್ತಿದ್ದಂತೆ ಮೇಜಿನ ಬಳಿ ಇದ್ದ ಮೂವರು ಆರೋಗ್ಯಕಾರ್ಯಕರ್ತರು ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ.

ವೀಡಿಯೋವನ್ನು ಹಂಚಿಕೊಂಡ ಜಿಲ್ಲಾ ಆರೋಗ್ಯ ಇಉಲಾಖೆಯು ಆಸ್ಪತ್ರೆಯ ಸಿಬ್ಬಂದಿಗಳು ಶಾಂತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ರೀತಿಗೆ ಕೃತಜ್ಞತೆಯ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಕಳೆದ ರಾತ್ರಿ ಸಂಭವಿಸಿದ ಭೂಕಂಪದಲ್ಲಿ ಅಫ್ಘಾನಿಸ್ಥಾನದಲ್ಲಿ 2 ಮತ್ತು ಪಾಕಿಸ್ತಾನದಲ್ಲಿ 6, ಒಟ್ಟು 11 ಸಾವುಗಳು ವರದಿಯಾಗಿವೆ. 6.5 ತೀವ್ರತೆಯ ಭೂಕಂಪನದ ಕೇಂದ್ರ ಬಿಂದು ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಆಗಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!