ಮಡಿಕೇರಿ: ಇದು ಪೋಷಕರ ನಿರ್ಲಕ್ಷ್ಯ ಅನ್ನಬೇಕೆ ಅಥವಾ ಮಗುವಿನ ಆಯುಷ್ಯ ಮುಗಿದಿತ್ತೇ ದೇವರ ವಿಧಿಯಾಟವೇ ಒಂದು ಗೊತ್ತಾಗುತ್ತಿಲ್ಲ ಅಪರೂಪದ ಘಟನೆಗೆ ಒಂದು ಮಗು ಬಲಿಯಾಗಿದೆ ಹೌದು ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿ ಎಂಟು ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಮುನೀರ್ ಎಂಬವರ ಪುಟ್ಟ ಮಗು ಆಟವಾಡುತ್ತಾ ಆಟವಾಡುತ್ತಾ ಉಂಗುರವನ್ನು ನುಂಗಿದ್ದು ಬಳಿಕ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥವಾಗಿದ್ದ ಮಗುವನ್ನು ತಕ್ಷಣ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರೂ ಅಲ್ಲಿ ಸಾಧ್ಯವಾಗದೇ ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: https://dtvkannada.in/archives/10484
ಮಗುವಿನ ಆರೋಗ್ಯ ಪರಿಶೀಲನೆ ನಡೆಸಿದ ವೈದ್ಯರ ತಂಡ ಸತತವಾಗಿ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಉಂಗುರವನ್ನು ಹೊರತೆಗೆಯಲು ಯಶಸ್ವಿಯಾಗಿದ್ದರು.
ಆದರೆ ದೇವರ ವಿಧಿಯಾಟ ಬೇರೆಯೇ ಆಗಿತ್ತು ಉಂಗುರವನ್ನು ಯಶಸ್ವಿಯಾಗಿ ಹೊರ ತೆಗೆದಿದ್ದರು ಪುಟ್ಟ ಮಗು ಬೆಳಗ್ಗೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು ಎಂಟು ತಿಂಗಳ ಮುದ್ದು ಮುದ್ದು ಮಗುವನ್ನು ಕಳೆದುಕೊಂಡ ದಂಪತಿಗಳ ದುಃಖವನ್ನು ಕಂಡು ಎಲ್ಲರ ಕಣ್ಣಲ್ಲೂ ಕಣ್ಣೀರು ಬರಿಸುವಂತಿತ್ತು.