ಪುತ್ತೂರು: ಎಲ್ಲಾ ತಂದೆಯಂದಿರ ಕಣಸಾಗಿರುತ್ತೇ ಯೌವ್ವನಕ್ಕೆ ಬಂದ ಮಕ್ಕಳನ್ನು ಮದುವೆ ಮಾಡಿಕೊಡುವುದು ಆದರೆ ಮದುವೆಗೆಂದು ಕೂಡಿಟ್ಟ ಹಣವನ್ನು ಅಥವಾ ಆಸ್ತಿಯನ್ನು ನಮ್ಮಿಂದ ದೋಚಿದರೆ ಹೇಗಿರುತ್ತೆ ನಮ್ಮ ಪರಿಸ್ಥಿತಿ ಅಂತಹ ಘಟನೆಯೊಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪ ನಡೆದಿದೆ. ಹೌದು ಮಗಳ ವಿವಾಹಕ್ಕೆ ಚಿನ್ನಾಭರಣ ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಾಯರ್ಪಾಡಿ ನಿವಾಸಿ ಮೊಹಮ್ಮದ್ ಅವರಿಂದ 10 ಲಕ್ಷ ರೂ.ದೋಚಿದ್ದು ಇದೀಗ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಖತರ್ನಾಕ್ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಖತರ್ನಾಕ್ ಆರೋಪಿಯು ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ಮುಸ್ತಫಾ (41)ಎಂದು ತಿಳಿದು ಬಂದಿದೆ. ಈತನಿಂದ ಈಗಾಗಲೇ 9 ಲಕ್ಷ ರೂ.ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಇನ್ನು ಒಂದು ಲಕ್ಷ ಎತ್ತಿಕೊಂಡು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.ಅವನಿಗಾಗಿ ಇದೀಗ ಪೊಲೀಸರು ಬಲೆ ಬೀಸಿದ್ದಾರೆ
ಸೋಮವಾರ ಇಳಂತಿಲ ಗ್ರಾಮದ ಪೆದಮಲೆಯ ಸರಳೀಕಟ್ಟೆ ರಿಫಾಯಿನಗರ ರಸ್ತೆಯಲ್ಲಿ ಈ ಒಂದು ಸಿನಿಮಿಯ ರೀತಿಯ ಪ್ರಕರಣ ಸಂಭವಿಸಿದ್ದು ಕಾಯರ್ಪಾಡಿ ನಿವಾಸಿ ಮಹಮ್ಮದ್ ಪತ್ನಿ ಜೊತೆ ಮಗಳ ಮದುವೆಗೆ ಚಿನ್ನ ಖರೀದಿಸಲು ಹತ್ತು ಲಕ್ಷ ರೂ.ಹಣವನ್ನು ತೆಗೆದುಕೊಂಡು ಉಪ್ಪಿನಂಗಡಿಯ ಜ್ಯುವೆಲ್ಲರಿಗೆ ಹೋಗುವಾಗ ಹಣ ದೋಚಿ ಪರಾರಿಯಾಗಿದ್ದರು.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಮೊಹಮ್ಮದ್ ಕೇಸ್ ದಾಖಲಿಸಿದ್ದು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಓರ್ವನಿಗೆ ಬಂಧಿಸಿದ್ದಾರೆಂದು ತಿಳಿದು ಬಂದಿದೆ.