dtvkannada

'; } else { echo "Sorry! You are Blocked from seeing the Ads"; } ?>

ಕಾರ್ಕಳ: ಒಂದು ನಿಮಿಷ ಕೂಡ ತಾಯಿಯನ್ನು ಬಿಟ್ಟಿರಲಾಗದ ಯುವತಿಯು ತನ್ನ ತಾಯಿಯ ಅಕಾಲಿಕ ನಿಧನದ ಸುದ್ದಿ ತಿಳಿದು ಆಘಾತಗೊಂಡ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಈದು ನೂರಾಲ್ ಬೆಟ್ಟು ಕಜೆ ಎಂಬಲ್ಲಿ ಇಂದು ಸಂಭವಿಸಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ 65 ವರ್ಷ ಪ್ರಾಯದ ಭಾಗಿ ಎಂಬವರು ಮಂಗಳವಾರ ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಮನೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಆಕೆಯ ಮಗಳು ರೇಖಾ (25)ಎಂದಿನಂತೆ ನಾರಾವಿಯ ಫ್ಯಾನ್ಸಿ ಅಂಗಡಿಯ ಕೆಲಸಕ್ಕೆಂದು ಹೊರಟು ಹೋಗಿದ್ದಳು. ಅಂಗಡಿಯಲ್ಲಿದ್ದ ಆಕೆಗೆ ಪರಿಚಯಸ್ಥರೊಬ್ಬರು ಕರೆ ಮಾಡಿ ತಾಯಿಗೆ ಸೌಖ್ಯವಿಲ್ಲ ಮನೆಗೆ ಬಾ ಎಂದು ಎಂದು ಹೇಳಿದ್ದರು.

ಅಸೌಖ್ಯದಿಂದ ಇದ್ದ ತಾಯಿಗೆ ಏನೋ ಆಗಿರ ಬೇಕು ಎಂಬ ಪ್ರಶ್ನೆಯ ತಬ್ಬಿಬ್ಬಾಗಿ ಕೊನೆಗೆ ತಾಯಿ ಮೃತ ಪಟ್ಟಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಕೆಲಸದಿಂದ ಹಿಂತಿರುಗಿದ್ದ ರೇಖಾ ಮನೆಗೆ ಹೋಗುವ ಮುನ್ನವೇ ಮನೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಗ್ರಾಮಸ್ಥರನ್ನೆ ನಿಬ್ಬೆರಗಾಗಿಸಿದೆ..

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬಂದಿ ಘಟನಾ ಸ್ಥಳಕ್ಕೆ ತೆರಳಿ ಪ್ಲಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!