ದೆಹಲಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಕೇಂದ್ರದ ಚುನಾವಣಾ ಆಯೋಗ ಕರ್ನಾಟಕದ 2023 ರ ವಿಧಾನ ಸಭಾ ಚುನಾವಣೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ಮೇ 10 ರಂದು ಚುನಾವಣೆ ನಡೆಯಲಿದ್ದು ಮೇ 13 ಕ್ಕೆ ಫಲಿತಾಂಶ ಹೊರ ಬೀಳಲಿದೆ.ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.ನೀತಿ ಸಂಹಿತೆ ಪ್ರಕಾರ ದಾಖಲೆಗಳಿಲ್ಲದ ಹಣ, ಅಥವಾ ಯಾವುದೇ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಜನಪ್ರತಿನಿಧಿಗಳ ಫೋಟೋ ಬ್ಯಾನರ್ ಅಳವಡಿಸುವುದು ಅವೆಲ್ಲವೂ ನೀತಿ ಸಂಹಿತೆಗೆ ಒಳಪಡುತ್ತದೆ.
ಇನ್ನೂ ವಿಮಾನ ನಿಲ್ದಾಣ ಬ್ಯಾಂಕ್ ವೈವಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.ಇನ್ನು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕಾಗಿದ್ದು ಎಲ್ಲಾ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಇಂದಿನಿಂದಲೇ ರಾಜ್ಯಾದ್ಯಂತ ನೀತಿಸಂಹಿತೆ ಜಾರಿಗೆ ತರಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ
ಒಟ್ಟು ಮತದಾರರು- 5,21,73,579
ಪುರುಷ ಮತದಾರರು-2,62,42,561
ಮಹಿಳಾ ಮತದಾರರು-2,59,26,319
ಮೊದಲ ಬಾರಿ ಮತದಾರರು-9,17,241
80 ವರ್ಷ ಮೇಲ್ಪಟ್ಟ ಮತದಾರರು- 12,15,763
ವಿಕಲಾಂಗ ಮತದಾರರು-5,55,073
ಒಟ್ಟು ಮತದಾನ ಕೇಂದ್ರ-58,282
ನಗರ ಪ್ರದೇಶ ಮತಗಟ್ಟೆಗಳು- 24,063
ಗ್ರಾಮೀಣ ಪ್ರದೇಶ ಮತಗಟ್ಟೆಗಳು-34,219
ಸೂಕ್ಷ್ಮ ಮತಗಟ್ಟೆಗಳು-12,000
ಒಟ್ಟು 58282 ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಪೈಕಿ 12,000 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಪರಿಗಣಿಸಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅವರು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ರಾಜೀವ್ ಕುಮಾರ್ ತಿಳಿಸಿದರು.