ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆ ರಂಗು ಕಾವೇರುತ್ತಿದ್ದು ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ದೀಡಿರ್ ಬದಲಾವಣೆ ಕೂಡ ಸಂಭವಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ಏನೆಂದರೆ ಈಗಾಗಲೇ ಪುತ್ತೂರಿನಲ್ಲಿ ಬಿಜೆಪಿಯಿಂದ ಮತ್ತೊಮ್ಮೆ ಸಂಜೀವಣ್ಣ ಎಂದು ಹೇಳುತ್ತಿದ್ದ ಜನರಿಗೆ ನಿನ್ನೆಯಿಂದ ಹರಿದಾಡುತ್ತಿರುವ ಶಾಸಕರ ಚಿತ್ರಗಳನ್ನು ಕಂಡು ದಂಗಾಗಿದ್ದಾರೆ..!
ಹಿಗಿರುವಾಗ ಈಗಾಗಲೇ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು ಹೈಕಮಾಂಡಿಗೂ ಈ ಒಂದು ಮಾಹಿತಿ ತಲುಪಿದ್ದು ಸಂಜೀವ ಮಠಂದೂರ್‌ರವರಿಗೆ ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ನೀಡಲಾಗುವುದಿಲ್ಲ ಎಂಬ ಮಾಹಿತಿ ಕೇಳಿ ಬರುತ್ತಿದೆ.



ಹಾಗಾಗಿ ಪುತ್ತೂರಿನಲ್ಲಿ ಈ ಬಾರಿ ಎಲ್ಲಾ ಯುವಕರು ಅತೀ ಹೆಚ್ಚು ಒಳವು ತೋರಿದ್ದು ಬಿಜೆಪಿಯಲ್ಲಿ ಸಕ್ರಿಯವಾಗಿರುವ ಅದೇ ರೀತಿ ಭಜರಂಗದಳ ಮುಂತಾದ ಹಲವು ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಅಪ್ಪಟ ಬಿಜೆಪಿಗ ಅರುಣ್ ಕುಮಾರ್ ಪುತ್ತಿಲವರಿಗಾಗಿದ್ದು ಈಗಾಗಲೇ ಇವರ ಹೆಸರನ್ನು ಹೈಕಮಾಂಡ್ ಬರೆದಿಟ್ಟುಕೊಂಡು ಮಾಹಿತಿ ಕಲೆಹಾಕಿದೆ ಎಂದು ತಿಳಿದು ಬಂದಿದೆ.ಹಾಗಾಗಿ ಈ ಬಾರಿ ಬಹುತೇಕ ಅರುಣ್ ಕುಮಾರ್ ಪುತ್ತಿಲವರಿಗೆ ಟಿಕೆಟ್ ಫಿಕ್ಸ್ ಆಗುವ ಸಂಭವ ಹೆಚ್ಚಿದ್ದು ಇನ್ನು ಬಿಜೆಪಿ ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳಲಾಗುವುದು ಎನ್ನುವುದು ನೋಡಬೇಕಾಗಿದೆ.

ಅದೇ ರೀತಿ ಎಸ್ಡಿಪಿಯಲ್ಲಿ ಶಾಫಿ ಬೆಳ್ಳಾರೆಯಾದರೆ ಜೆಡಿಎಸ್‌ನಿಂದ ಇಬ್ಬರ ಹೆಸರು ಕೇಳಿಬರುತ್ತಿದ್ದು ಇನ್ನು ಫೈನಲ್ ಆಗಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಒಂದೇ ಪಕ್ಷದಿಂದ ಅತೀ ಹೆಚ್ಚು ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇರುವುದೇ ಪುತ್ತೂರಿನ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲಿ ಈಗಾಗಲೇ ಹದಿನಾಲ್ಕು ಮಂದಿ ಆಕಾಂಕ್ಷಿಗಳಾಗಿದ್ದು ಈಗಾಗಲೇ ಇವರಲ್ಲಿ ಮೂವರ ಹೆಸರನ್ನು ಕೆಪಿಸಿಸಿ ಫೈನಲ್ ಮಾಡಿದ ಬಗ್ಗೆ ಖಚಿತ ಮಾಹಿತಿಯೂ ಹೊರಬಂದಿದೆ.




ಈ ಮೂವರಲ್ಲಿ ಒಬ್ಬರು ಕೆಪಿಸಿಸಿ ಸಂಯೋಜಕಾರಾದರೆ ಇನ್ನೊಬ್ಬರು ಪುತ್ತೂರಿನ ಮಾಜಿ ಶಾಸಕಿಯಾಗಿದ್ದು ಮತ್ತೋರ್ವರು ಇತ್ತಿಚೆಗೆ ಬಿಜೆಪಿಯಿಂದ ಸೇರ್ಪಡೆ ಗೊಂಡವರಾಗಿದ್ದಾರೆ.
ಇದೀಗ ಈ ಮೂವರಲ್ಲಿ ಇಬ್ಬರ ಹೆಸರು ಫೈನಲಿಗೆ ತಲುಪಿದ್ದು ಅದು ಇದೇ ಬರುವ ಎಪ್ರಿಲ್ ಹನ್ನೊಂದರಂದು ಹೊರ ಬೀಳಲಿದೆಯೆಂದು ತಿಳಿದು ಬಂದಿದೆ.ಅಂತೂ ಇಂತು ತಾಳೆ ಹಾಕಿ ನೋಡಿದಾಗ ಈ ಬಾರಿ ಕಾಂಗ್ರೆಸಿನಿಂದ ಹುಟ್ಟು ಕಾಂಗ್ರೆಸಿಗನಾಗಿರುವ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದು ಬಡವರ ಏಳಿಗೆಯಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಿರುವ ಪುತ್ತೂರಿನಲ್ಲಿ ಜಾತ್ಯತೀತ ನಾಯಕ ಎಂದೇ ಕರೆಸಿಕೊಂಡಿರುವ ಕೆಪಿಸಿಸಿ ಸಂಯೋಜಕ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿಯವರಿಗೆ ಟಿಕೆಟ್ ಫಿಕ್ಸ್ ಆಗಲಿದ್ದು ಯಾವುದೇ ಸಂಶಯವಿಲ್ಲ ಎನ್ನುವ ಮಾತೊಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.ಮತ್ತೊಂದು ವಿಚಾರವೆಂದರೆ ಇವರ ಧರ್ಮಪತ್ನಿಯೂ ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ನಾಯಕಿಯಾಗಿ ಗುರುತಿಸಿಕೊಂಡಿದ್ದು ಕೂಡ ಇವರಿಗೆ ಈ ಸಂದರ್ಭದಲ್ಲಿ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ ಎಂದು ತಿಳಿದು ಬಂದಿದೆ.
ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಮೇಲೆ ತಿಳಿಸಿದ ಈ ಇಬ್ಬರಿಗೆ ಮಣೆ ಹಾಕಿ ಟಿಕೆಟ್ ಕೊಟ್ಟರು ಅಚ್ಚರಿ ಪಡಬೇಕಾಗಿಲ್ಲ ಕಾರಣ ಇಬ್ಬರಲ್ಲಿ ಒರ್ವ ಅಪ್ಪಟ ಬಿಜೆಪಿಗ ಮತ್ತೊಬ್ಬರು ಹುಟ್ಟು ಕಾಂಗ್ರೆಸಿಗರಾಗಿರುವುದು ಪಾಸಿಟಿವ್ ಆಗಿದೆ ಜೊತೆಗೆ ಕಾರ್ಯಕರ್ತರಿಗೂ ಇದು ಸಮಾಧಾನ ಕೊಡುವಂತಹ ವಿಷಯವೇ ಸರಿ ಅನ್ನಬಹುದು ಆದರೆ ಹೈಕಮಾಂಡ್ ಮಾತ್ರ ಏನು ತಿರ್ಮಾಣ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.