ಮೈಸೂರು: ದಿವಂಗತ ಆರ್.ದ್ರುವ ನಾರಾಯಣ್ ರವರ ಪತ್ನಿ ವೀಣಾ ರವರು ಇಂದು ಶುಕ್ರವಾರ ಮನೆಯಲ್ಲಿ ನಿಧನರಾಗಿದ್ದಾರೆ.
ಮಾಜಿ ಸಂಸದ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ ರವರು ನಿಧನರಾಗಿ 27 ದಿನಗಳಲ್ಲಿ ಪತ್ನಿ ವೀಣಾ ರವರು ನಿಧನರಾಗಿದ್ದು ಪುತ್ರ ದರ್ಶನ್ ಗೆ ಇದೊಂದು ಆಘಾತವೇ ಎನ್ನಬಹುದು. ಪತಿಯ ಸಾವಿನಿಂದ ಕೊರಗಿದ್ದ ವೀಣಾ ರವರು ಅನಾರೋಗ್ಯಕ್ಕೀಡಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರು ಇಂದು (ಏಪ್ರಿಲ್ 07) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಆರ್.ದ್ರುವ ನಾರಾಯಣ ರವರು ಇತ್ತೀಚೆಗಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು.
ತಂದೆ ಆರ್.ಧ್ರುವನಾರಾಯಣ ಸಾವಿನ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರು ಈಗ ತಾಯಿ ವೀಣಾರನ್ನು ಕಳೆದುಕೊಂಡಿದ್ದಾರೆ. ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ನಿಧನರಾಗಿ ತಿಂಗಳೊಳಗೆ ಪತ್ನಿ ವೀಣಾ ಧ್ರುವನಾರಾಯಣ್ ಸಾವನ್ನಪ್ಪಿದ್ದಾರೆ
ತಂದೆ ಮತ್ತು ತಾಯಿಯ ಅಕಾಲಿಕ ಮರಣದಿಂದ ಮಗ ದರ್ಶನ್ ಗೆ ಇದೊಂದು ಜೀವನದ ಅತೀ ದೊಡ್ಡ ಆಘಾತ ಎಂದೇ ಹೇಳಬಹುದು.
ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ದರ್ಶನ್ ರವರು ಚುನಾವಣೆಗೆ ನಿಂತಿದ್ದು ಇಂದು ಚುನಾವಣಾ ಪ್ರಚಾರಕ್ಕೆ ಅವರು ತೆರಳಿದ್ದರು ಇದೇ ವೇಳೆ ಮನೆಯಲ್ಲಿ ತಾಯಿ ನಿಧನರಾಗಿದ್ದಾರೆ.