ಉಳ್ಳಾಲ: ವರ್ತಕನೋರ್ವ ವ್ಯಾಪಾರದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿ ಕೊನೆಗೆ ತನ್ನ ಅಂಗಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವರ್ತಕನನ್ನು ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಳ್ವ (45) ಎಂದು ಗುರುತಿಸಲಾಗಿದೆ.
ಆಳ್ವರವರು ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರಿಂಗ್ ಸಂಬಂಧಿಸಿದ ಹೋಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.
ಆರ್ಥಿಕವಾಗಿ ಮತ್ತು ವ್ಯಾಪರಾ ವಹಿವಾಟು ಸರಿಕಟ್ಟಾಗಿ ನಡೆಯದ ಕಾರಣ ಸಂಕಷ್ಟದಲ್ಲಿದ್ದ ಎನ್ನಲಾಗಿದ್ದು ಅವರು ಇಂದು ಬೆಳಗ್ಗೆ 6.30ಕ್ಕೆ ಮನೆಯಿಂದ ಹೊರಟಿದ್ದು, ತನ್ನ ಅಂಗಡಿಗೆ ಬಂದು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ.
ಘಟನಾ ಸ್ಥಳದಲ್ಲಿ ಪ್ರವೀಣ್ ಬರೆದಿದ್ದೆನ್ನಲಾದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ, ಅಮ್ಮ ಪತ್ನಿ,ಮಗನಲ್ಲಿ ಸಾರಿ’ ಅಂತ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮೃತ ಪ್ರವೀಣ್ ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ.ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.