ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವೀಡಿಯೊ ವೈರಲ್ ಆಗಿದ್ದು, ಈ ಬಗ್ಗೆ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಇಂದು (ಏ28) ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡುತ್ತಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಮೆಟ್ರೋದಲ್ಲಿ ಹಸ್ತಮೈಥುನ ಮಾಡಿಕೊಂಡಿರುವ ಯುವಕನ ಸುತ್ತಮುತ್ತಿನಲ್ಲಿ ಕುಳಿತಿದ್ದ ಇತರ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡಿದೆ, ಈ ಕಾರಣಕ್ಕೆ ಪಕ್ಕದಲ್ಲೇ ಕುಳಿತ ಪ್ರಯಾಣಿಕರು ದೂರ ಸರಿದಿದ್ದಾರೆ.
ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ನೋಟಿಸ್ ನೀಡಿರುವುದಾಗಿ ಟ್ವಿಟರ್‌ನಲ್ಲಿ ಮಲಿವಾಲ್ ಹೇಳಿದ್ದಾರೆ.ದೆಹಲಿ ಮೆಟ್ರೋದಲ್ಲಿ ವ್ಯಕ್ತಿಯೊಬ್ಬರು ನಾಚಿಕೆಯಿಲ್ಲದೆ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವೈರಲ್ ವೀಡಿಯೊ ಕಂಡುಬಂದಿದೆ. ಇದು ತುಂಬಾ ಅಸಹ್ಯಕರ ಮತ್ತು ನೋವಿನ ಸಂಗತಿಯಾಗಿದೆ.ಈ ನಾಚಿಕೆಗೇಡಿನ ಕೃತ್ಯದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾನು ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ಸೂಚನೆ ನೀಡುತ್ತಿದ್ದೇನೆ ಎಂದು ಟ್ವಿಟರ್‌ನಲ್ಲಿ ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.
ಯುವಕನೊಬ್ಬ ಮೊಬೈಲ್ ಫೋನ್‌ನಲ್ಲಿ ನೀಲಿಚಿತ್ರ ನೋಡುತ್ತಾ ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡುತ್ತಿರುವ ಬಗ್ಗೆ ವೀಡಿಯೊದಲ್ಲಿ ತೋರಿಸಲಾಗಿದೆ.ಈ ಬಗ್ಗೆ ಆತನ ಸುತ್ತಲು ಕುಳಿತಿದ್ದ ಇತರ ಪ್ರಯಾಣಿಕರು ಆತನಿಂದ ದೂರ ಹೋಗಿದ್ದಾರೆ. ಇದೀಗ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಘಟನೆಯನ್ನು ಮತ್ತೊಬ್ಬ ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದಾರೆ. ಆದರೆ ಆತನ ಈ ಕೃತ್ಯವನ್ನು ಯಾರು ವಿರೋಧಿಸಿಲ್ಲ ಮತ್ತು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದಾರೆ.
ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ – https://youtu.be/OKmnH6KylRE
ದೆಹಲಿ ಮೆಟ್ರೋದಲ್ಲಿ ಇಂತಹ ಘಟನೆ ಇದೇ ಮೊದಲಲ್ಲ, ಇತ್ತೀಚಿನ ವೈರಲ್ ವೀಡಿಯೊದಲ್ಲಿ ಮಹಿಳೆಯೊಬ್ಬರು ಬ್ರಾ ಮತ್ತು ಮಿನಿಸ್ಕರ್ಟ್ ಹಾಕಿಕೊಂಡು ರೈಲಿನಲ್ಲಿ ಪ್ರಯಾಣಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲು DMRC ಪ್ರಯಾಣಿಕರನ್ನು ಒತ್ತಾಯಿಸಿದೆ.
ಇದೀಗ ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದು, ಐಪಿಸಿಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.