ವಿಟ್ಲ: ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಮುಂದೆ “ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರಾ” ಎಂಬ ಪ್ರಶ್ನೆ ಪುತ್ತೂರು 206 ಕ್ಷೇತ್ರ ವ್ಯಾಪ್ತಿಯ ಮೇಗಿನಪೇಟೆ ಮತಗಟ್ಟೆಯಲ್ಲಿ ಕೇಳಿದ್ದು ಮಾತಿನ ಚಮಕಿಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಇಂದು ಮತದಾನದ ದಿನವಾಗಿದ್ದ ಇಂದು ವಿಟ್ಲ ಮೇಗಿನಪೇಟೆ ಮತಗಟ್ಟೆಗೆ ಎರಡು ಪಕ್ಷದ ಅಭ್ಯರ್ಥಿಗಳಾದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮತ್ತು ಹಿಂದುತ್ವದ ಅಡಿಯಲ್ಲಿ ಚುನವಾಣೆ ಎದುರಿಸುತ್ತಿರುವ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅದೇ ಸಮಯದಲ್ಲಿ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ನೀವಿಬ್ಬರೂ ಒಂದೆಯೇ ಒಟ್ಟೋಟ್ಟಾಗಿ ಬರುತ್ತಿದ್ದೀರಿ.!!? ನಿಮ್ಮೊಳಗಡೆ ಹೊಂದಾಣಿಕೆಯೇ ಎಂದು ಬಿಜೆಪಿಯ ಕೃಷ್ಣ ಮುದೂರು ಅರುಣ್ ಪುತ್ತಿಲ ಬೆಂಬಲಿಗರಾದ ಅನಂತ್ ಪ್ರಸಾದ್ ಬಳಿ ಪ್ರಶ್ನಿಸಿದ್ದು, ಈ ಸಂದರ್ಭ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ವಿಷಯ ಅರಿತು ಕೃಷ್ಣ ಮುದೂರು ಬಳಿ ಬಂದು ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಮಹಾಲಿಂಗೇಶ್ವರನ ಮುಂದೆ ಬಂದು ಹೇಳಿ ಎಂದು ಹೇಳಿದ್ದು, ಈ ವೇಳೆ ಕೃಷ್ಣ ಮುದೂರು ನಾನು ಯಾವ ವಿಚಾರಕ್ಕೂ ಇಲ್ಲ ಎನ್ನುವ ಮಾತನ್ನ ಹೇಳಿ ವಿಷಯವನ್ನು ಕೈ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.