ಪುತ್ತೂರು: ಕರ್ನಾಟಕ ಸರ್ಕಾರದ ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಇಂಜಿನಿಯರ್ ಆಗಿ ಶೇಖಮಲೆಯ ಅಬ್ದುಲ್ ರಶೀದ್ ಎಸ್.ಎಂರವರು ಆಯ್ಕೆಯಾಗುವ ಮೂಲಕ ಸರ್ಕಾರಿ ನೌಕರರಾಗಿ ನಿಯುಕ್ತಗೊಂಡಿರುತ್ತಾರೆ.
ಮೂಲತಃ ಪುತ್ತೂರು ತಾಲೂಕಿನ ಕುಂಬ್ರದ ಶೇಖಮಲೆಯಲ್ಲಿರುವ ಅದೇ ರೀತಿ ಶೇಖಮಲೆ ಜಮಾಅತಿನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಐ.ಮಹಮ್ಮದ್ರವರ ಕಿರಿಯ ಪುತ್ರ ಅಬ್ದುಲ್ ರಶೀದ್ರವರಾಗಿದ್ದು ಇವರ ಇನ್ನೋರ್ವ ಪುತ್ರ ಇಬ್ರಾಹಿಂ ಮಾಸ್ಟರ್ ಸರಕಾರಿ ಶಿಕ್ಷಕರಾಗಿದ್ದು ಇವರು ಕಳೆದ ವರ್ಷ ಅತ್ಯುತ್ತಮ ಶಿಕ್ಷಕರಾಗಿ ರಾಜ್ಯಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಂದ ಪಡೆದುಕೊಂಡಿದ್ದರು.
ಅಬ್ದುಲ್ ರಶೀದ್ರವರು ಪ್ರಾಥಮಿಕ ಶಿಕ್ಷಣವನ್ನು ಶೇಖಮಲೆ, ಪ್ರೌಡ ಶಿಕ್ಷಣವನ್ನು ಕುಂಬ್ರ ಸರ್ಕಾರಿ ಕಾಲೇಜು,ಡಿಪ್ಲೋಮಾ ಪದವಿಯನ್ನು ವಿವೇಕಾನಂದ ಪುತ್ತೂರು ಹಾಗೂ ಇಂಜಿನಿಯರಿಂಗ್ ಪದವಿಯನ್ನು ಸುಳ್ಯದ ಕೆವಿಜೆ ಕಾಲೇಜಿನಲ್ಲಿ ಪಡೆದುಕೊಂಡಿದ್ದು ಇದೀಗ ಸರ್ಕಾರಿ ಉದ್ಯೋಗ ಪಡೆಯುವ ಮೂಲಕ ಹೆತ್ತವರ ಹಾಗೂ ಊರವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇವರ ಈ ಒಂದು ಸಾಧನೆಗೆ ಊರವರು,ಹೆತ್ತವರು,ಶಿಕ್ಷಕರು ಅದೇ ರೀತಿ ಶೇಖಮಲೆ ಜಮಾಅತ್ ಕಡೆಯಿಂದಲೂ ಅಭಿನಂದನೆ ಸಲ್ಲಿಸಿದ್ದು ಇವರ ಸಹೋದರ ಇಬ್ರಾಹಿಂ ಮಾಷ್ಟರ್ರವರು ಕಳೆದ ವರ್ಷ ರಾಜ್ಯಪ್ರಶಸ್ತಿಗೆ ಆಯ್ಕೆಯಾಗಿದ್ದಾಗ ಶೇಖಮಲೆ ಜಮಾಅತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಗೌರವಿಸಿದ್ದರು.