ಮಂಗಳೂರು: ಮನುಷ್ಯ ಮನಸ್ಸುಗಳೆಡೆಯಲ್ಲಿ ಇರುವ ಕಾಲ ಪ್ರೀತಿ ಸಾಮರಸ್ಯವನ್ನೇ ಬಿತ್ತುವ ಆ ಮೂಲಕ ಜನ ಯಾವತ್ತಿಗೂ ಯಾರನ್ನೂ ಮರೆಯಲು ಸಾಧ್ಯವಿಲ್ಲ.ಇಂತಹ ಸ್ನೇಹ ಪ್ರೀತಿ ನೀಡಿ ನಮ್ಮ ಮನಸ್ಸಿನಲ್ಲಿ ಅಜರಾಮರಾಗಿ ಕುಳಿತವರು ನಮ್ಮ ಜೊತೆಗಾರ ಸಿದ್ದಿಕ್ ಝುಹ್ರಿ ಉಸ್ತಾದ್ ಅವರು ಇಲ್ಲಿ ಮಾಡಿದ ಸೇವೆ ಅನನ್ಯವಾದದ್ದು ಎಂದು ಅಬ್ಬಾಸ್ ಸಖಾಫಿ ಮರಿಕ್ಕಳ ಮದ್ರಸದಲ್ಲಿ ಶಿಕ್ಷಕರಾಗಿ ಮೂರು ವರ್ಷಗಳಿಂದ ಸೇವೆಗೈದು ಇದೀಗ ವಿದೇಶ ಯಾತ್ರೆ ಹೊರಡಲಿರುವ ಸಿದ್ಧಿಕ್ ಝುಹ್ರಿ ತೆಕ್ಕಾರು ರವರ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮದ್ರಸದ ಇತರ ಅದ್ಯಾಪಕರು ಮಾತನಾಡಿ ಸಿದ್ದಿಕ್ ಝುಹರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ವಿದೇಶ ಯಾತ್ರೆಗೆ ಶುಭಹಾರೈಸಿದರು.
ನೆಚ್ಚಿನ ಅದ್ಯಾಪಕನನ್ನು ಬೀಳ್ಕೊಡುವಾಗ ಪ್ರೀತಿಯ ವಿದ್ಯಾರ್ಥಿಗಳು ಕಣ್ಣೀರು ಹರಿಸಿದರು.
ವಿದ್ಯಾರ್ಥಿಗಳು ಮತ್ತು ಸಹ ಅಧ್ಯಾಪಕರು
ಮೆಮೆಂಟೋ, ಶಾಲು ಹೊದಿಸಿ ಸನ್ಮಾನ ಮಾಡಿ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಅಬ್ಬಾಸ್ ಸಖಾಫಿ, ಆಬಿದ್ ಸಖಾಫಿ, ಜಬ್ಬಾರ್ ಸಹದಿ, ಶಫಿಕ್ ಸಖಾಫಿ ಮತ್ತು ಮದ್ರಸಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.