dtvkannada

'; } else { echo "Sorry! You are Blocked from seeing the Ads"; } ?>

ದರ್ಬೆತ್ತಡ್ಕ: ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ಮನೆಯ ಹಿತ್ತಲಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಮರದ ಗೆಲ್ಲು ತಲೆಗೆ ಬಡಿದು ಸ್ಥಳದಲ್ಲೇ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ನಿನ್ನೆ ಸಂಜೆ ಸುಮಾರು ಐದು ಗಂಟೆಗೆ ಮನೆಯ ಹಿಂಬಾಗದಲ್ಲಿ ಮರ ಕಡಿಯುತ್ತಿದ್ದಾಗ ಮರದ ಗೆಲ್ಲೊಂದು ರಭಸದಿಂದ ಮೇಲಿಂದ ಕೆಳಗೆ ಬಂದಿದ್ದು ಕೆಳಗೆ ನಿಂತಿದ್ದ ವ್ಯಕ್ತಿಯ ಮುಖದ ಎಡಭಾಗಕ್ಕೆ ಬಡಿದು ತಲೆಯ ಒಂದು ಭಾಗವನ್ನು ಸಿಲಿಕೊಂಡು ಹೋಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರು ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ದರ್ಬೆತ್ತಡ್ಕದ ಗುರಪ್ರಸಾದ್ ಎಂದು ತಿಳಿದು ಬಂದಿದ್ದು ಇವರ ಪತ್ನಿಯು ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗೆ ಕುಂಬ್ರದ ಕಾಂಗ್ರೆಸ್ ನಾಯಕರ ಭೇಟಿ: ಘಟನೆ ಗಂಭೀರತೆ ಅರಿತು ಒಳಮೊಗ್ರು ಗ್ರಾಮದ ವಲಯಾಧ್ಯಕ್ಷ ಅಶೋಕ್ ಪೂಜಾರಿ ಮತ್ತು ಒಳಮೊಗ್ರು ಗ್ರಾಮದ ಸದಸ್ಯ ಶೀನಪ್ಪ ಹಾಗು ಮುಂತಾದವರು ಭೇಟಿ ನೀಡಿದ್ದು ಘಟನೆಯು ಬಗ್ಗೆ ಸಂತಾಪ ಸೂಚಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!