ಮಂಗಳೂರು: ಕರ್ನಾಟಕಾದ್ಯಂತ ಕಳೆದ 5 ವರ್ಷಗಳಿಂದ ರಕ್ತದಾನ ಶಿಬಿರ ಮತ್ತು ರಕ್ತ ಪೂರೈಸುವಲ್ಲಿ ಮಹತ್ವದ ಸ್ಥಾನ ಪಡೆದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಮಹಾಸಭೆಯು ಶುಕ್ರವಾರ ಸಂಜೆ 6 ಕ್ಕೆ ಮಂಗಳೂರಿನ ರೀಗಲ್ ಪ್ಲಾಝದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಗೌರವಧ್ಯಕ್ಷರಾಗಿ ಸುಲೈಮಾನ್ ಶೇಖ್ ಬೆಳುವಾಯಿ
ಮುಖ್ಯ ಸಲಹೆಗಾರರಾಗಿ ಫಯಾಝ್ ಅಲಿ ಬೈಂದೂರು,
ಅಧ್ಯಕ್ಷರಾಗಿ ನಝೀರ್ ಹುಸೈನ್ ಮಂಚಿಲ, ಪ್ರಧಾನ ಕಾರ್ಯದರ್ಶಿಯಾಗಿ ಸತ್ತಾರ್ ಪುತ್ತೂರು, ಕೋಶಾಧಿಕಾರಿಯಾಗಿ ಇಮ್ತಿಯಾಝ್ ಬಜ್ಪೆ ರವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಗಳಾಗಿ ಸಂಶುದ್ದೀನ್ ಬಳ್ಕುಂಜೆ, ಮತ್ತು ಝಕೀರ್ ಇಕ್ಲಾಸ್ ಉಳ್ಳಾಲ, ಮಾಧ್ಯಮ ಮುಖ್ಯಸ್ಥರಾಗಿ ಅಬ್ದುಲ್ ಹಮೀದ್ ಗೋಳ್ತಮಜಲ್, ಮಾಧ್ಯಮ ಕಾರ್ಯದರ್ಶಿಯಾಗಿ ಬಾತಿಶ್ ತೆಕ್ಕಾರ್, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥರಾಗಿ ಮುಸ್ತಫಾ ಕೆ. ಸಿ ರೋಡ್, ಸಂಚಾಲಕರಾಗಿ ನವಾಝ್ ಉಳ್ಳಾಲ, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಮಂಗಳೂರು, ಮೇಲ್ವಿಚಾರಕರಾಗಿ ಸಫ್ವಾನ್ ಕಲಾಯಿ ರವರನ್ನು ಆಯ್ಕೆ ಮಾಡಲಾಯಿತು.
ಬ್ಲಡ್ ಹೆಲ್ಪ್ ಕೇರ್ ಗಲ್ಫ್ ಪ್ರತಿನಿಧಿಗಳಾಗಿ ನವಾಝ್ ದೇರಳಕಟ್ಟೆ, ಇಫ್ತಿಕಾರ್ ಅಹ್ಮದ್ ಕೃಷ್ಣಾಪುರ ಕಾರ್ಯಕಾರಿಣಿ ಸದಸ್ಯರಾಗಿ ಅಲ್ಮಾಝ್ ಉಳ್ಳಾಲ, ತಸ್ಲೀಮ್ ಹರೇಕಳ, ರಾಫಿಝ್ ಕೃಷ್ಣಾಪುರ ರವರನ್ನು ಆಯ್ಕೆ ಮಾಡಲಾಯಿತು.