dtvkannada

'; } else { echo "Sorry! You are Blocked from seeing the Ads"; } ?>

ಅದೊಂದು ವಿಚಿತ್ರ ಆಚರಣೆ. ಶತ ಶತಮಾನಗಳಿಂದ ನಡೆದುಕೊಂಡು ಬಂದಿದೆ ಇಂತಹದೊಂದು ಹರಕೆ. ಇದನ್ನ ನೋಡಿದ ಜನರ ಎದೆ ಝಲ್ ಎನ್ನುವುದು ಖಚಿತ. ಮಾಮೂಲಾಗಿ ದೇವಿಗಳಿಗೆ ಕೋಳಿ- ಕುರಿ ಅಥವಾ ಕೋಣ ಬಲಿ ಕೊಟ್ಟು ಹರಕೆ ತಿರಿಸುವುದನ್ನ ನೋಡಿದ್ದೀರಿ. ಆದ್ರೆ ಇಲ್ಲಿನ ಭಕ್ತರೇ ವಿಚಾರವೇ ಬೇರೆ. ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡು ಅಪರೂಪದ ಹರಕೆ ತೀರಿಸುತ್ತಾರೆ. ಇಲ್ಲಿದೆ ನೋಡಿ ವಂಡರ್ ಹರಕೆ ಜಾತ್ರೆ ಸ್ಟೋರಿ.

ಇಲ್ಲಿ ನೋಡಿ ಮಾರುತಿ ವ್ಯಾನ್ ಎಳೆಯಲಾಗುತ್ತಿದೆ. ಅದರಲ್ಲೊಬ್ಬ ಚಾಲಕ ಕುಳಿತಿದ್ದಾನೆ. ಆದ್ರೆ ಆ ವ್ಯಾನ್ ಬಂದ್ ಆಗಿದೆ. ಬೆನ್ನಿಗೆ ಕಬ್ಬಿಣ ಹುಕ್ ಗಳನ್ನ ದೇಹದೊಳಗೆ ಚುಚ್ಚಿಕೊಂಡು ಅದಕ್ಕೆ ಹಗ್ಗ ಕಟ್ಟಿ ಎಳೆಯುತ್ತಿದ್ದಾನೆ ಈ ವ್ಯಕ್ತಿ. ಇದನ್ನ ನೋಡಿದ್ರೆ ಯಾವುದೋ ಸ್ಪರ್ಧೆ ನಡೆಯುತ್ತಿದೆ ಎಂದುಕೊಳ್ಳಬೇಡಿ. ಇದು ತಮಿಳು ಭಕ್ತರು ದೇವಿಗೆ ಅರ್ಪಿಸುವ ಹರಕೆಯಂತೆ.

'; } else { echo "Sorry! You are Blocked from seeing the Ads"; } ?>

ನಾವು ನಿಮಗೆ ಇಲ್ಲಿ ತೊರಿಸುತ್ತಿರುವುದು ದಾವಣಗೆರೆ ನಗರದ ಶೇಖರಪ್ಪ ನಗರದಲ್ಲಿ ಇರುವ ದೊಡ್ಡ ಮಾರಮ್ಮನ ಜಾತ್ರೆಯ ದೃಶ್ಯಗಳು. ಈ ಜಾತ್ರೆಯ ವಿಶೇಷ ಇನ್ನೂ ಇದೆ. ಇಲ್ಲೊಬ್ಬ ನೋಡಿ ದೇವಿಯನ್ನ ಚಕ್ರವಿಲ್ಲದ ಬುಟ್ಟಿಯಿಂದ ಎಳೆದುಕೊಂಡು ಓಡುತ್ತಿದ್ದಾನೆ. ಇತನ ಬೆನ್ನಿಗೂ ಹುಕ್ ಗಳನ್ನ ಹಾಕಿ ಹಗ್ಗಕ್ಕೆ ಕಟ್ಟಲಾಗಿದೆ.

ನಿಜಕ್ಕೂ ಇದನ್ನೆಲ್ಲ ನೋಡಿದರೆ ಎದೆ ಝಲ್ ಎನ್ನುತ್ತದೆ. ಆ ಭಕ್ತರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನ. ಹೀಗೆ ಒಬ್ಬರಿಗಿಂತ ಇನ್ನೊಬ್ಬರು ಎಂಬುವಂತೆ ದೊಡ್ಡ ಮಾರಮ್ಮನ ದೇವಸ್ಥಾನದಿಂದ ಎಪಿಎಂಸಿ ಕಾಂಕ್ರೀಟ್​​ ರಸ್ತೆಯಲ್ಲಿ ಸುಮಾರು ಎರಡು ಕಿಲೋ ಮೀಟರ್ ವರೆಗೆ ಇಂತಹ ಹರಕೆ ತೀರಿಸುವ ಮೆರವಣಿಗೆ ನಡೆಯಿತು.

'; } else { echo "Sorry! You are Blocked from seeing the Ads"; } ?>

ಪುರುಷರಷ್ಟೆ ಅಲ್ಲಾ. ಮಹಿಳೆಯರೂ ಬಾಯಿ ವಸಡು, ಕೈ ಸೇರಿದಂತೆ ವಿವಿಧ ಕಡೆ ಭಾರಿ ಗಾತ್ರದ ಕಬ್ಬಿಣದ ಅಸ್ತ್ರಗಳನ್ನ ಹಾಕಿಕೊಂಡು ಹರಕೆ ತೀರಿಸಿದರು. ಇವರೆಲ್ಲರ ಮಾತೃ ಭಾಷೆ ತಮಿಳು. ಶತಮಾನಗಳಿಂದ ದುಡಿಮೆ ಅರಸಿ ಬಂದು ದಾವಣಗೆರೆಯಲ್ಲಿ ನೆಲೆಸಿದ್ದಾರೆ. ಹೀಗೆ ಬಂದು ನೆಲೆಸಿದ ಅವರು ತಮ್ಮ ಆಚರಣೆಗಳನ್ನ ಇಂತಹ ಆಧುನಿಕ ಕಾಲದಲ್ಲಿಯೂ ಸಹ ಬಿಟ್ಟು ಕೊಟ್ಟಿಲ್ಲ!

ಇದಕ್ಕಾಗಿ ಬಹುತೇಕರು ವ್ರತ ಹಿಡಿದಿರುತ್ತಾರೆ. ಉಪವಾಸ ಮಾಡುತ್ತಾರೆ. ದೊಡ್ಡ ಮಾರಮ್ಮ ಅಂದ್ರೆ ದಿಟ್ಟ ದೇವತೆ ಅಂತೆ. ಈ ವರ್ಷದ ಜಾತ್ರೆಯಲ್ಲಿ ಬೇಡಿಕೊಂಡರೆ ಬರುವ ವರ್ಷದ ಜಾತ್ರೆಗೆ ಅದು ಕೈಗೂಡುತ್ತದೆ. ಕೈಗೂಡಿದ ಬಳಿಕ ಇಂತಹ ಹರಕೆ ತಿರಿಸುತ್ತಾರೆ. ಸಣ್ಣ ಮಕ್ಕಳು ಮಹಿಳೆಯರು ಎನ್ನದೆ ಇಲ್ಲಿ ಹರಕೆ ತೀರಿಸುತ್ತಾರೆ.

ನಿಜಕ್ಕೂ ಇದೊಂದು ಭಯಾನಕ ಆಚರಣೆ. ಇಂತಹ ಆಚರಣೆಗೆ ಸರ್ಕಾರ ನಿರ್ಬಂಧ ಹಾಕಬೇಕಿದೆ. ತಮಗೆ ಯಾವುದೇ ರೀತಿಯ ನೋವು ಆಗಲ್ಲ ಎನ್ನುತ್ತಾರೆ. ಆದ್ರೆ ಹರಕೆ ಮಾತ್ರ ಭಯಾನಕವಾಗಿದೆ ಎಂಬುದು ಸುಳ್ಳಲ್ಲ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!