ಪ್ರೀತಿ ಎಂದರೆ ಒಂದು ಸುಂದರ ಜಗತ್ತು, ಎಲ್ಲರಿಗೂ ಪ್ರೀತಿ ಆಗುವುದು ಸಹಜ, ಪ್ರೀತಿಸಿದವರ ಜತೆಗೆ ನಾವು ಹೇಗೆಲ್ಲ ಬದುಕಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವೊಂದು ಪ್ರೇಮಿಗಳು ಹುಚ್ಚುತನವನ್ನು ಮಾಡುತ್ತಾರೆ. ಈ ಪ್ರೀತಿ ಎನ್ನುವುದು ಒಂದು ರೀತಿಯ ಅಮಲು ಎಂಬುದಂತೆ ವರ್ತಿಸುತ್ತಾರೆ. ಹೌದು ಇದಕ್ಕೆ ಒಂದು ಸ್ಪಷ್ಟ ಸಾಕ್ಷಿ ಇಲ್ಲಿದೆ ನೋಡಿ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ, ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಪ್ರೇಮಿ ತನ್ನ ಹುಡುಗಿಯನ್ನು ಬೈಕ್ನ ಟ್ಯಾಂಕ್ ಮೇಲೆ ಕೂರಿಸಿಕೊಂಡು, ಆಕೆ ಆತನನ್ನು ಅಪ್ಪಿಕೊಂಡಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ.
ವೀಡಿಯೊವನ್ನು ರಾತ್ರಿ ಹೊತ್ತಿನಲ್ಲಿ ರೆಕಾರ್ಡ್ ಮಾಡಲಾಗಿದ್ದು. ಬೈಕ್ನ ಹಿಂದೆ ಕಾರಿನಲ್ಲಿದ್ದ ವ್ಯಕ್ತಿ ಈ ವೀಡಿಯೊವನ್ನು ಚಿತ್ರಿಕರಣ ಮಾಡಿದ್ದಾನೆ. ಬೈಕ್ ಸವಾರ ಹೈವೆ ನಿಯಮದ ಜತೆಗೆ ಟ್ರಾಫಿಕ್ ನಿಯಮವನ್ನು ಕೂಡ ಉಲ್ಲಂಘನೆ ಮಾಡಿದ್ದಾನೆ, ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಕೂಡ ಹಾಕಿಲ್ಲ ಎಂದು ಹೇಳಲಾಗಿದೆ. ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಪ್ರೇಮ ಜೋಡಿ ಈ ‘ರೊಮ್ಯಾಂಟಿಕ್ ಸ್ಟಂಟ್’ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ ಎಂದು ಪೊಲೀಸರಿಗೂ ದೂರು ನೀಡಲಾಗಿದೆ.
Akashkchoudhary ಎಂಬ ಟ್ವಿಟರ್ ಖಾತೆಯಲ್ಲಿ ಆಕಾಶ್ ಕುಮಾರ್ ಎಂಬವವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನಾವು ನಿಯಮಗಳು ಮತ್ತು ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸುತ್ತೇವೆ. ನಿಮ್ಮ ಇಂತಹ ಹುಚ್ಚಾಟದಿಂದ ನಿಮ್ಮೊಂದಿಗೆ ನಾವು ಸಾಯುತ್ತೇವೆ. ಬಳಕೆದಾರರ ಪ್ರಕಾರ, ವೈರಲ್ ಕ್ಲಿಪ್ ಇಂದಿರಾಪುರಂನ NH 9 ನಿಂದ ವೈರಲ್ ಆಗಿದೆ ಎಂದು ಹೇಳಲಾಗಿದೆ.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಚ್ಚಿನ ಜನರು ಯುಪಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಪ್ರೀತಿಯ ಜೋಡಿಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವೈರಲ್ ಕ್ಲಿಪ್ ನೋಡಿ ಬಳಕೆದಾರರು ಕಮೆಂಟ್ ಮಾಡಿದ್ದು ಮತ್ತು ಬುಲ್ಡೋಜರ್ ಬಾಬಾನ ಪೊಲೀಸರು ಈಗ ಎಲ್ಲಿದ್ದಾರೆ? ಮತ್ತೊಂದೆಡೆ, ಪೊಲೀಸರು ತಕ್ಕ ಪಾಠ ಕಲಿಸುವವರೆಗೆ ಈ ಜನರು ಸುಧಾರಿಸುವುದಿಲ್ಲ ಎಂದು ಇನ್ನೊಬ್ಬ ಬಳಕೆದಾರರು ಹೇಳುತ್ತಾರೆ.