ಬಂಟ್ವಾಳ: ಸಧ್ಯದ ಸಾಮಾಜಿಕ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಕುಟುಂಬದ ಮಹತ್ವ ತಿಳಿಸುವುದು ದೊಡ್ಡ ಜವಾಬ್ದಾರಿಯಾಗಿದೆ. ಸಣ್ಣ ಕುಟುಂಬವಿರುವ ಕಾರಣ ಕುಟುಂಬದ ಉಳಿದ ಸದಸ್ಯರ ಜೊತೆ ಆ ಮಕ್ಕಳಿಗೆ ಯಾವುದೇ ಬಾಂಧವ್ಯ ಇರುವುದಿಲ್ಲ. ಕೂಡು ಕುಟುಂದಲ್ಲಿ ಬದುಕಿದರೆ ಮಕ್ಕಳು ಪ್ರತಿಯೊಬ್ಬರಿಗೆ ಗೌರವ ಕೊಡುವುದು ಸೇರಿದಂತೆ ಹಲವಾರು ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ
ಎಂದು ಸಜಿಪ ಪುಲ್ಲೀಸ್ ಚಲ್ಲೀಸ್ ಎಂಬ ಕುಟುಂಬ ಸಮ್ಮಿಲನದಲ್ಲಿ ಭಾಗವಹಿಸುತ್ತಾ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಶಿಕ್ಷಕರಾದ ಬಿ ಎಂ ರಫೀಕ್ ತುಂಬೆ ಮಾತಾಡಿದರು.
ಕುಟುಂಬದ ಹಿರಿಯ ವ್ಯಕ್ತಿಯಾಗಿರುವ ಅಲ್ ಹಾಜ್ ಶೇಖ್ ಅಬ್ದುಲ್ಲಾ ಬಾಖವಿಯವರು ದುವಾ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಕುಟಂಬ ಬಂಧದ ಕುರಿತು ಉಪನ್ಯಾಸ ನೀಡಿದರು.ಕುಟುಂಬದ ಸದಸ್ಯರಾದ ಫಾಹೀಂ ಕಿರಾತ್ ಪಠಿಸಿದರು.
ಮಂಚಿ ಇಬ್ರಾಹಿಂ, ಎಸ್ ಎ ಖಾದರ್, ಝುಬೈರ್ ಹಾಜಿ, ಮೊಹಮ್ಮದ್ ಬೋಳಂತೂರು, ಅಬ್ಬಾಸ್ ಪನ್ಯ, ಅಬ್ದುಲ್ ರಝಾಕ್ ಸಜಿಪ, ಬಿ.ಮೊಹಮ್ಮದ್ ಕಕ್ಕಿಂಜೆ,ಇಬ್ರಾಹೀಂ ಇನೋಳಿ ಆರೀಫ್ ಕುಂದಾಪುರ, ನೌಫಲ್ ಕಣ್ಣೂರು,ಇಕ್ಬಾಲ್ ಕಯ್ಯಾರ್,ಜಲಾಲ್ ಇನೋಳಿ,ಸಮದ್ ಕೊಡಾಜೆ, ಹನೀಫ್ ಕಲ್ಲಡ್ಕ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಟುಂಬ ಸದಸ್ಯ ರಿಗೆ ವಿವಿಧ ಸಾಂಸ್ಕೃತಿಕ ಆಟಗಳನ್ನು ಏರ್ಪಡಿಸಲಾಯಿತು.ಕಳೆದ ಎರಡು ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ವಿಶೇಷ ದರ್ಜೆ ಯಲ್ಲಿ ಅಂಕ ಪಡೆದ ಕುಟುಂಬದ ಪ್ರತಿಭಾನಿತ ಮಕ್ಕಳಾದ ಖತೀಜಾ ಇಫಾ (612) ಫಾತಿಮಾ ಅಲ್ಫಾ (569) ಇವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಉಪಸ್ಥಿತರಿದ್ದ ಮೊಹಮ್ಮಧ ಕಕ್ಕಿಂಜೆಯವರು ಪರಸ್ಪರ ಒಬ್ಬರನೊಬ್ಬರು ಅರಿತು ಬಾಳಿದರೆ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ ಎಂದು ಕರೆ ನೀಡಿದರು.ಕುಟುಂಬ ಸದಸ್ಯರಿಗೆ ಸಫ್ವಾನ್ ಕಲಾಯಿ ಕ್ವಿಜ್ ಕಾರ್ಯಕ್ರಮ ನಡೆಸಿದರು.ಸಾಂಸ್ಕೃತಿಕ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.