';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಟಾಗೋರ್ ಕಡಲ ತೀರದಲ್ಲಿ ಎಂಡಿ ಬಲೆಗೆ ಬೃಹತ್ ಗಾತ್ರದ ಕುರುಡೆ ಮೀನೊಂದು ಬಿದ್ದ ಬಗ್ಗೆ ವರದಿಯಾಗಿದೆ.
ಕಳೆದ ಎರಡು ದಿನಗಳಿಂದ ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲು ವಾತಾವರಣ ನಿರ್ಮಾಣವಾಗಿದ ಕಾರಣ ಎಂದಿನಂತೆ ಸಾಂಪ್ರದಾಯಿಕ ಏಂಡಿ ಮೀನುಗಾರಿಕೆ ಬಿರುಸು ಪಡೆದಿದೆ.
ಶನಿವಾರ ಉದಯ ಬಾನಾವಳಿ ಎನ್ನುವವರ ತಂಡವು ಮೀನುಗಾರಿಕೆ ನಡೆಸುತ್ತಿದ್ದಾಗ ಬರೋಬ್ಬರಿ ೨೫ ಕೆಜಿ ತೂಕದ ಕುರಡೆ ಮೀನು ಸಿಕ್ಕಿದ್ದು ಮೀನು ಹಿಡಿಯುತ್ತಿದ್ದವರಿಗೆ ಮತ್ತು ಸಾರ್ವಜನಿಕರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಇಲ್ಲದಿದ್ದರೆ ಚಿಕ್ಕ ಪುಟ್ಟ ಮೀನುಗಳು ಬಲೆಗೆ ಬೀಳುತ್ತಿದ್ದು ಇಂದು ಬರೋಬ್ಬರಿ 25 ಕೆಜಿ ತೂಕವಿರುವ ರುಚಿಕರವಾದ ಮೀನನ್ನು ಸಮುದ್ರ ತೀರದಲ್ಲಿ ಇದ್ದ ಸಾರ್ವಜನಿಕರಿಗೆ ಕೆಜಿಗೆ 350/- ರಂತೆ ಮಾರಾಟ ಮಾಡಿದ್ದು ಈ ಒಂದು ಮೀನಿಗೆ ಅಂದಾಜು 8750/- ರೂಪಾಯಿ ವರೆಗೆ ದೊರಕಿದ್ದು ಈ ಸಂದರ್ಭದಲ್ಲಿ ಗ್ರಾಹಕರು ಇದನ್ನು ಪಡೆಯಲು ಮುಗಿ ಬೀಳುವ ಪ್ರಸಂಗವು ಕಂಡು ಬಂದಿದೆ.