ವಿಟ್ಲ:ನೆರೆಹೊರೆಯ ಮಕ್ಕಳ ನಡುವೆ ಆಟದ ಸಂದರ್ಭದಲ್ಲಿ ಉಂಟಾದ ಗಲಾಟೆಯು ಇದೀಗ ಪೋಲಿಸ್ ಠಾಣೆ ಮೆಟ್ಟಿಲೇರಿ ಎಫ್ಐಆರ್ ದಾಖಲಾದ ಬಗ್ಗೆ ವರದಿಯಾಗಿದೆ.
ವಿಟ್ಲ ಸಮೀಪದ ನಲ್ಲಿ ವಾಸವಿರುವ ಜೈನುಲ್ ಅಬೀದ್ ಅವರ ಪತ್ನಿ ಆಯಿಷಾತ್ ಮುಬೀನಾ ಹಾಗೂ ಅವಳ ತಮ್ಮ ಮುನಾಝ್ ಗಂಡನಿಲ್ಲದ ಸಮಯದಲ್ಲಿ ನೆರೆಮನೆಗೆ ನುಗ್ಗಿ ವಿವಾಹಿತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಮುನಾಝ್, ಹಾಗೂ ಹಲ್ಲೆ ಪ್ರಕರಣದಲ್ಲಿ ಮುಬೀನಾ ಅವರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ-
ನೆರೆಹೊರೆಯ ಮನೆಯವರಾದ ಅಬ್ದುಲ್ ಜಲೀಲ್ ಹಾಗೂ ಜೈನುಲ್ ಅಭೀದ್ ರವರ ಮಕ್ಕಳು ಆಟವಾಡುತ್ತಿರುವ ಸಂದರ್ಭದಲ್ಲಿ ಅವರೊಳಗೆ ಉರುಳಾಟ ನಡೆದಿರುತ್ತದೆ.ನಂತರ ಅಂದು ರಾತ್ರಿ ಜಲೀಲ್ ಮನೆಗೆ ತೆರಳಿದ ಮುನಾಸ್ ಹಾಗೂ ಆತನ ಅಕ್ಕ ಮುಬೀನಾ ಜಲೀಲ್ ನ ಹೆಂಡತಿ ಹನ್ನತ್ ಬಾನು ಎಂಬ ಮಹಿಳೆಗೆ ಮಕ್ಕಳ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ಅಶ್ಲೀಲ ಹಾಗೂ ಅವ್ಯಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವದಲ್ಲದೆ ಮುನಾಸ್ ಆಕೆಯನ್ನು ಮಾನಭಂಗಕ್ಕೆ ಯತ್ನಿಸಿದರೆಂದು ಆರೋಪಿಸಲಾಗಿದೆ.ಹಲ್ಲೆಯಿಂದ ಗಾಯಗೊಂಡಿದ್ದ ಹನ್ನತ್ ಬಾನು ಳನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಕರೆತಂದಿದ್ದು ವೈಧ್ಯರು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ.
ಘಟನೆಯ ಸಂದರ್ಭ ವೈಯುಕ್ತಿಕ ಕೆಲಸದ ನಿಮಿತ್ತ ಹೊರ ಊರಿನಲ್ಲಿದ್ದ ಜಲೀಲ್ ರವರು ಮನೆಗೆ ಬಂದು ಆರೋಪಿ ಮುನಾಸ್ ನ ಮನೆಗೆ ತೆರಳಿ ಈ ವಿಷಯವನ್ನು ಸೌಹಾರ್ದಯುತವಾಗಿ ಮುಗಿಸುವ ಬಗ್ಗೆ ಪ್ರಸ್ತಾಪ ನಡೆಸಿದಾಗ ಆರೋಪಿ ಇವರೊಂದಿಗೂ ಉಡಾಫೆಯಂದ ವರ್ತಿಸಿರುವ ಬಗ್ಗೆ ಆರೋಪಿಸಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.