';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ನಡೆದ ಬೆನ್ನಲ್ಲೇ ಜನರನ್ನು ಬೆಚ್ಚಿ ಬೀಳಿಸಿದ ಮತ್ತೊಂದು ಕೊಲೆ ಸುರತ್ಕಲಿನ ಮಂಗಳ ಪೇಟೆ ನಿವಾಸಿ ಫಾಝಿಲ್ ನಡೆದಿದ್ದು ಅದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾದ ಬಗ್ಗೆ ವರದಿಯಾಗಿದೆ.
ಕೊಲೆ ಪ್ರಕರಣದ ಏಳು ಮಂದಿ ಆರೋಪಿಗಳಲ್ಲಿ ಇಬ್ಬರಾದ ಅಜಿತ್ ಕ್ರಾಸ್ತಾ ಮತ್ತು ಶ್ರೀನಿವಾಸ್ ಗೆ ಜಾಮೀನು ನೀಡಲಾಗಿದೆ.
ಕಳೆದ ವರ್ಷ ಜುಲೈ 28 ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್ ನಲ್ಲಿ ಫಾಝಿಲ್ ಅವರ ಬರ್ಬರ ಹತ್ಯೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದು ಆ ಪೈಕಿ ಹರ್ಷಿತ್ ಎಂಬಾತನಿಗೆ ನ್ಯಾಯಾಲಯವು ಸೆ.7, 2022ರಂದು ಜಾಮೀನು ಮಂಜೂರು ಮಾಡಿದ್ದು ಇದೀಗ ಮತ್ತಿಬ್ಬರು ಆರೋಪಿಗಳಿಗೆ ಜಾಮೀನು ನೀಡಿದ್ದು ಇನ್ನು ನಾಲ್ಕು ಮಂದಿ ಆರೋಪಿಗಳು ಜೈಲುವಾಸ ಅನುಭವಿಸುತ್ತಿದ್ದಾರೆಂದು ತಿಳಿದು ಬಂದಿದೆ.