ಪುತ್ತೂರು: ಯೂತ್ ಫ್ರೆಂಡ್ಸ್ ಮೈದಾನಿ ಮೂಲೆ ಇದರ ಆಶ್ರಯದಲ್ಲಿ ಬಂಧುತ್ವ ಕಾರ್ಯಕ್ರಮ ಮತ್ತು ಸೌಹಾರ್ದತೆಯ ಇಫ್ತಾರ ಕೂಟದ ಜೊತೆ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಇಂದು ಏಪ್ರಿಲ್ 5ರಂದು ಸಂಜೆ 4 ಗಂಟೆಗೆ ಮೈದಾನಿ ಮೂಲೆ ಜುಮ್ಮಾ ಮಸೀದಿ ವಠಾರದಲ್ಲಿ ಬೃಹತ್ ಇಫ್ತಾರ್ ಕೂಟ ಮತ್ತು ಸನ್ಮಾನ ಕಾರ್ಯಕ್ರಮದ ಜೊತೆಗೆ ಬಂಧುತ್ವ ಕಾರ್ಯಕ್ರಮ ಕೂಡ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸಯ್ಯದ್ ಮುಝಮ್ಮಿಲ್ ತಂಙಲ್ ಕಾಸರಗೋಡು ಹಾಗೂ ಉದ್ಘಾಟನೆಯನ್ನು ಅಬೂಝ ಅಬ್ದುಲ್ ರಜಾಕ್ ಖಾಸಿಮಿ ನಿರ್ವಹಿಸಲಿದ್ದಾರೆ.
ಈ ಒಂದು ಸೌಹಾರ್ದತೆಯ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪುತ್ತೂರಿನ ಶಾಸಕರಾದಂತಹ ಶ್ರೀ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹಾಗೂ ಮಾಜಿ ಶಾಸಕರಾದಂತಹ ಸಂಜೀವ ಮಠಂದೂರು ಅದೇ ರೀತಿ ಕೆಪಿಸಿಸಿ ಸಂಯೋಜಕರಾದಂತಹ ಶ್ರೀ ಹೇಮಾನಾಥ್ ಶೆಟ್ಟಿ ಅದೇ ರೀತಿ ಸಂಪ್ಯ ಠಾಣಾಧಿಕಾರಿ ಜಂಬುರಾಜ್ ಉಪನಿರೀಕ್ಷಕರು ಹಾಗೂ ರಂಗಸಾಮಯ್ಯ ಪೊಲೀಸ್ ವೃತ್ತ ನಿರೀಕ್ಷಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣಕಾರರಾಗಿ ಹುಸೇನ್ ದಾರಿಮಿ ರೆಂಜಲಾಡಿ ಇವರು ನಿರ್ವಹಿಸಲಿದ್ದು ಗೌರವ ಉಪಸ್ಥಿತಿಯಲ್ಲಿ ಬಹು ಅಸ್ಸಯ್ಯದ್ ಇಸ್ಮಾಯಿಲ್ ತಂಙಳ್ ಹಾಗೂ ಗಣ್ಯ ಉಪಸ್ಥಿತಿಯಲ್ಲಿ ಹಲವಾರು ಸಾಮಾಜಿಕ ನೇತಾರರು ರಾಜಕೀಯ ನಾಯಕರು ಹಲವು ಮುಖಂಡರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೃಹತ್ ಆದಂತಹ ಇಪ್ತಾರ್ ಕೂಟ ಹಾಗೂ ಬಂಧುತ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವ ಕೋಮುಗಲಭೆ, ಕೋಮು ಸಾಮರಸ್ಯಕ್ಕೆ ಅಡ್ಡಿಪಡಿಸುವಂತಹ ಯುವಕರ ತಂಡ ತಲೆ ಎತ್ತಿ ಮೆರೆಯುತ್ತಿರುವಾಗ ಇಲ್ಲಿನ ಯುವಕರು ತಂಡವೊಂದು ಯೂತ್ ಫ್ರೆಂಡ್ಸ್ ಮೈದಾನಿ ಮೂಲೆ ಎಂಬ ಹೆಸರಿಟ್ಟುಕೊಂಡು ಬಂದುತ್ವ ಕಾರ್ಯಕ್ರಮದ ಜೊತೆಗೆ ಸೌಹಾರ್ದತೆಯ ಇಫ್ತಾರ್ ಕೂಟವನ್ನು ಈ ಯುವಕರ ತಂಡ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹಿಂದೂ ಮುಸ್ಲಿಂ ಕ್ರೈಸ್ತ ಮತ ಜಾತಿ ಧರ್ಮ ನೋಡದೆ ಎಲ್ಲರನ್ನ ಒಗ್ಗೂಡಿಸಿಕೊಂಡು ಮೈದಾನಿ ಮೂಲೆಯ ಜುಮಾ ಮಸೀದಿಯ ವಠಾರದಲ್ಲಿ ಈ ಒಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂಬಂಧಪಟ್ಟ ಸಂಘಟನೆ ತಿಳಿಸಿದ್ದಾರೆ. ಅದೇ ರೀತಿ ಡಿಟಿವಿ ಕನ್ನಡದ ಮೂಲಕ ಎಲ್ಲಾ ಧರ್ಮದ ಸಹೋದರರನ್ನು ಈ ಒಂದು ಕಾರ್ಯಕ್ರಮಕ್ಕೆ ಪ್ರೀತಿ ಪೂರಕವಾಗಿ ಆಹ್ವಾನವನ್ನು ನೀಡಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ವಿನಂತಿಯನ್ನು ಕೂಡ ಮಾಡಿಕೊಂಡಿದ್ದಾರೆ.