ವಿಟ್ಲ: ಕೇವಲ ಹನ್ನೊಂದು ಮಕ್ಕಳನ್ನಿರಿಸಿಕೊಂಡು ಬಂಡಿತ್ತಡ್ಕ ಎಂಬ ಊರಿನಲ್ಲಿ ಶಿಕ್ಷಕರು ಮತ್ತು ಪೋಷಕರು ಶಿಕ್ಷಣದ ವಿಚಾರದಲ್ಲಿ ಗಮನಾರ್ಹವಾದ ಸೇವೆಗಳನ್ನು ನಡೆಸುತ್ತಿದ್ದಾರೆ ಎಂದು ಪತ್ರಕರ್ತ ಬಾತಿಶ್ ತೆಕ್ಕಾರು ಅಭಿಪ್ರಾಯ ಪಟ್ಟರು.
ಇವರು ದ.ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಬಂಡಿತ್ತಡ್ಕ ಇದರ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಖಾಸಗಿ ಶಾಲೆಗೂ ಪೈಪೋಟಿ ನೀಡುವ ಮಟ್ಟಿಗೆ ಈ ಶಾಲೆ ಬೆಳೆದು ನಿಂತಿದ್ದು, ಸರ್ಕಾರಗಳು ಮಕ್ಕಳು ಕಡಿಮೆಯಿರುವ ಶಾಲೆಗಳನ್ನು ಮುಚ್ಚುವ ಸಮಯದಲ್ಲಿ ಬಂಡಿತ್ತಡ್ಕ ಶಾಲೆಯನ್ನು ಉಳಿಸುವ ಕೆಲಸ ಊರಿನವರು ಮಾಡುತ್ತಿದ್ದಾರೆ.
ಶಿಕ್ಷಣ ಊಟ ಉಪಚಾರಗಳನ್ನು ಸರ್ಕಾರ ನೀಡುವಾಗ ಉಚಿತ ಬ್ಯಾಗ್ ಪುಸ್ತಕಗಳನ್ನು ಊರಿನವರು ನೀಡುವ ಮೂಲಕ ಸರಕಾರಿ ಶಾಲಾ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಮಹತ್ವದ್ದು ಎಂದು ಅವರು ಹೇಳಿದರು.
ಕನ್ನಡವ ಉಳಿಸಿ ಬೆಳಸುವುದರ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಮಾದರಿಯಾಗಿ ಈ ಶಾಲೆ ಮುನ್ನಡೆಯುತ್ತಿದೆ ಎಂದು ಹಳೇ ವಿದ್ಯಾರ್ಥಿ ಸಂಘದ ಗೌರವಧ್ಯಕ್ಷರು ಹಾಗೂ ಪಿಡಿಒ ಉಳ್ಳಾಲ ಕೃಷ್ಣ ಕುಮಾರ್ ಕಮ್ಮಾಜೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಶಾಲೆಯ ನೂತನ ಗೇಟ್ ನ್ನು ಇದೇ ವೇಳೆ ಪಂಚಾಯತ್ ಉಪಾಧ್ಯಕ್ಷರು ಅಬ್ದುಲ್ ರಹ್ಮಾನ್ ಮತ್ತು ಈಶ್ವರ್ ರವರು ಉದ್ಘಾಟಿಸಿದರು. ಅಂಗನವಾಡಿ ಮತ್ತು ಶಾಲೆಗೆ ನೀಡಿದ ಕುರ್ಚಿ ಮತ್ತು ಬಟ್ಟಲುಗಳನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.
ದೇಣಿಗೆ ನೀಡಿದ ಈಶ್ವರ್ & ಇಸಾಕ್ ರವರನ್ನು ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್ ರವರು ನೆಹರೂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಚಂದ್ರ ಶೇಖರ್, ಕಮರುನ್ನಿಸ, ಪಂಚಾಯತ್ ಸದಸ್ಯರುಗಳಾದ ಮೊಯಿದು ಕುಂಞ ಮತ್ತು
ಬುಶ್ರಿಯಾ ಉಪಸ್ಥಿತರಿದ್ದರು.ಇದೇ ವೇಳೆ ವಿವಿಧ ಕಾರ್ಯಕ್ರಮಗಳಲ್ಲಿ ಬಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯಶಿಕ್ಷಕಿ ಸೆಕಿನಾ ಎಸ್ ಸ್ವಾಗತಿಸಿ ಶಾರದಾ ಟೀಚರ್ ವಂದಿಸಿದರು.ಶಿಕ್ಷಕಿ ವನಿತಾ ರವರು ನಿರೂಪಿಸಿದರು.