ಅರಿಯಡ್ಕ: ಹಜ್ಜ್ ಯಾತ್ರಾರ್ಥಿ ಗಳಿಗೆ ಬೀಳ್ಕೊಡುಗೆ ಸಮಾರಂಭವು ಮದ್ರಸ ಹಾಲ್ ನಲ್ಲಿ ನಡೆಯಿತು. ಜಮಾಅತ್ ಖತೀಬ್ ಉಸ್ತಾದರಾದ ಅಬ್ದುಲ್ ಜಲೀಲ್ ಸಖಾಫಿಯವರು ತಮ್ಮಪ್ರಾಸ್ತಾವಿಕ ಭಾಷಣದಲ್ಲಿ ಹಜ್ಜ್ ಕರ್ಮದ ಮಹತ್ವ ಹಾಗೂ ವಿಧಿ ವಿಧಾನಗಳ ಕುರಿತು ಸಂಕ್ಷಿಪ್ತ ವಾಗಿ ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿಯವರು ತಾನು ಹಜ್ ನಿರ್ವಹಿಸಿದ ಸಂದರ್ಭದ ನೆನಪುಗಳನ್ನು ಮೆಲುಕು ಹಾಕಿ ಕೆಲವು ಸಲಹೆಗಳನ್ನು ಸಹ ಯಾತ್ರಾ ರ್ಥಿಗಳೊಂದಿಗೆ ಹಂಚಿಕೊಂಡರು
ಈ ವರ್ಷದ ಹಜ್ಜ್ ಯಾತ್ರೆ ಕೈಗೊಳ್ಳುವ ಪಿ.ಎಂ ಶಾಫಿ ಮತ್ತು ಮುನೀರ್ ಕಾವೇರಿ ಯವರಿಗೆ ಜಮಾಅತ್ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಹಾಗೂ ಉಸ್ತಾದರುಗಳು ಸೇರಿ ಶಾಲು ಹೊದಿಸಿ ಶುಭ ಹಾರೈಸಿದರು.
ಯಾತ್ರಾರ್ಥಿ ಗಳು ಸೇರಿದವರೊಂದಿಗೆ ದುವಾ ವಸಿಯ್ಯತ್ ಮತ್ತು ಕೃತಜ್ಞತಾ ನುಡಿಗಳನ್ನು ನುಡಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಎಂ ಅಬ್ಬಾಸ್ ಹಾಜಿ, ಉಪಾಧ್ಯಕ್ಷ ಏ. ಆರ್ ಇಬ್ರಾಹಿಂ, ಜೊತೆ ಕಾರ್ಯದರ್ಶಿ ಮಹಮ್ಮದ್ ಎ ಎಸ್, ಸದಸ್ಯರುಗಳಾದ ಪಿ. ಎಂ ಹನೀಫ್ ಲೀಮಾ , ಯೂಸುಫ್ ಕೋರಿಕಾರ್, ಯೂಸುಫ್ ಹಾಜಿ ಪಿ. ಎಂ, ಹನೀಫ್ ಪಟ್ಲಕಾನ, ಹಾಗೂ ಪಿ. ಎಂ ಆದಮ್ ಕುಂಞ, ಅಬೂಬಕ್ಕರ್ ಮುಸ್ಲಿಯರ್, ಅಬ್ಬಾಸ್ ಜೆ, ಸುಲೇಮಾನ್ ಡಿ, ಖಾದರ್ ಚಕ್ಕನಡ್ಕ, ಮಹಮ್ಮದ್ ಕೆ, ಕರೀಮ್ ಹಾಜಿ ಕಾವೇರಿ, ಅಬ್ಬಾಸ್ ಅಂಗಡಿ, ಕಾಸಿಂ ಪಿ, ಇಬ್ರಾಹಿಂ ಮಡಿಕೇರಿ, ಅಬೂಬಕ್ಕರ್ ಜೆ, ಸಲಾಂ ಝುಹ್ರಿಉಸ್ತಾದ್,ಸಂಸುದ್ದೀನ್ ಮುಸ್ಲಿಯರ್, ಮೊದಲಾದವರು ಪ್ರಸ್ತುತ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಸದರ್ ಉಸ್ತಾದ್ ಅಬ್ದುಲ್ ಕರೀಂ ಬಾ ಹಸನಿ ಸ್ವಾಗತ ಭಾಷಣ ಮಾಡಿ ಕೊನೆಯಲ್ಲಿ ವಂದಿಸಿದರು