dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಕೇರಳದ ಪಾಲಕ್ಕಾಡ್ ನಾ ನಿಮಿಷ ಪ್ರಿಯಾಳ ಜೀವಕ್ಕೆ ಇನ್ನು ಒಂದೇ ದಿನ ಬಾಕಿಯಾಗಿದ್ದು ಇದರ ನಡುವೆ ಕೇಂದ್ರ ಸರ್ಕಾರವೂ ಕೈ ಚೆಲ್ಲಿದೆ. ಯಮನ್ ಸರ್ಕಾರ ಗಲ್ಲು ಶಿಕ್ಷೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಇವೆಲ್ಲದರ ಮದ್ಯೆ ಕೊನೆಯ ಪ್ರಯತ್ನ ಎಂಬಂತೆ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್ ಈ ಬಗ್ಗೆ ಮದ್ಯ ಪ್ರವೇಶಿಸಿದ್ದಾರೆ.ಕೊನೆಯ ಗಳಿಗೆಯಲ್ಲಿ ಯಮನ್ ನಲ್ಲಿ ತಲಾಲ್ ಸಹೋದರ ಸಹಿತ ಯಮನ್ ಸರ್ಕಾರದ ಮದ್ಯೆ ಉನ್ನತ ಮಟ್ಟದ  ಸಭೆ ನಡೆದಿದೆ ಎಂದು ಕೇರಳ ಸಹಿತ ಇನ್ನಿತರ ಮಾಧ್ಯಮಗಳು ವರದಿ ಹೇಳಿದೆ.

ಯಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ಪಾಲಕ್ಕಾಡ್ ನಿವಾಸಿ ನರ್ಸ್ ನಿಮಿಷ ಪ್ರಿಯಾಳನ್ನು ಗಲ್ಲುಗೇರಿಸಲು ಕೊನೆಯ ಒಂದು ದಿನವಷ್ಟೇ ಬಾಕಿಯಿದ್ದು ಕೇಂದ್ರ ಸರ್ಕಾರವೂ ಕೂಡ ಅಲ್ಲಿಯ ಪರಿಸ್ಥಿತಿ ಸರಿಯಿಲ್ಲ ನಮ್ಮಿಂದ ಉಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದು ಇದೆಲ್ಲದರ ಮದ್ಯೆ ಮುಸ್ಲಿಂ ಸಮುದಾಯದ ಅತ್ಯುನ್ನತ ನಾಯಕ ಎ ಪಿ ಉಸ್ತಾದ್ ಈ ವಿಚಾರದಲ್ಲಿ ಮದ್ಯ ಪ್ರವೇಶಿಸಿದ್ದಾರೆ. ಈ ಕುರಿತು ಎ ಪಿ ಉಸ್ತಾದ್ ಶೇಕ್ ಹಬೀಬ್ ಉಮರ್ ರವರ ಬಳಿ ಮಾತುಕತೆ ನಡೆಸಿದ್ದು ಅವರ ಉಪಸ್ಥಿತಿಯಲ್ಲಿ ಯಮನ್ ನಲ್ಲಿ ಉನ್ನತ ಮಟ್ಟದ ಸಭೆ ನಡೆದದ್ದಾಗಿ ವರದಿಯಾಗಿದೆ.

'; } else { echo "Sorry! You are Blocked from seeing the Ads"; } ?>

ಶೇಕ್ ಹಬೀಬ್ ಉಮರ್ ರವರು ಎ ಪಿ ಉಸ್ತಾದರ ಅಹ್ವಾನ ಸ್ವೀಕರಿಸಿ ಹಲವಾರು ಬಾರೀ ಭಾರತಕ್ಕೆ ಆಹ್ವಾನಿಸಿದ್ದರು.
ಆ ಆತ್ಮೀಯತೆ ಅಲ್ಲಿ ಅವರನ್ನು ಮಾತಾಡಿಸಿದೆ ಮಾತ್ರವಲ್ಲದೆ ಎ.ಪಿ ಉಸ್ತಾದ್ ಕೂಡ ಯಮನ್ ಗೆ ಹೋದಾಗಲೆಲ್ಲಾ ಅಲ್ಲಿಯ ಸರ್ಕಾರ ಉಸ್ತಾದ್ ಗೆ ಪ್ರತ್ಯೇಕ ಸೆಕ್ಯೂರಿಟಿ ಎಲ್ಲವೂ ನೀಡಿತ್ತು ಈ ಹಿನ್ನಲೆಯಲ್ಲಿ ಉಸ್ತಾದರ ಮದ್ಯಸ್ತಿಕೆ ಇಲ್ಲಿ ಬಹುಷಃ ಫಲ ಕಾಣಬಹುದು ಎನ್ನುವಹಾಗಿದೆ.

ಆದರೆ ಅಲ್ಲಿಯ ಕಾನೂನುಗಳು ಮತ್ತು ಮೃತ ವ್ಯಕ್ತಿ ತಲಾಲ್ ರವರ ಏಕೈಕ ಸಹೋದರ ಮಾತ್ರವೇ ಈ ಸಭೆಯಲ್ಲಿ ಬಾಗವಹಿಸಿದ್ದಾರೆ ಎಂದು ಹೇಳಲಾಗಿದೆ 
ಮಾತ್ರವಲ್ಲದೇ ಕೊನೆಯ ಒಂದು ದಿನವಷ್ಟೇ ಬಾಕಿಯಿರುವುದರಿಂದ ಕೊನೆಯ ಗಳಿಗೆಯಲ್ಲಿ ಏನೂ ಬೇಕಾದರೂ ಸಂಭವಿಸಬಹುದು.

ಒಂದು ಸಮಯ ಎ ಪಿ ಉಸ್ತಾದರ ಮಾತುಕತೆ ಯಶಸ್ವಿಯಾದರೆ ನಿಮಿಷ ಪ್ರಿಯಾಳಿಗೆ ಅದು ಮತ್ತೊಂದು ಜನ್ಮ.
ಗಲ್ಲು ಶಿಕ್ಷೆ ರದ್ದಾದರೆ ಇದೊಂದು ಪವಾಡವೇ ಸರಿ.
ಏನೇ ಆಗಲಿ ನಿಮಿಷ ಪ್ರಿಯಾಳಿಗೆ ಭಾರತದ ಕೋಟ್ಯಂತರ ಮಂದಿಗಳ ಪ್ರಾರ್ಥನೆ ಫಲಿಸಲಿ
ಎ.ಪಿ ಉಸ್ತಾದರ ಸಂಧಾನ ಮಾತುಕತೆ ಯಶಸ್ವಿಯಾಗಲಿ ನಿಮಿಷ ಪ್ರಿಯಾ ಬದುಕಿ ಬರಲಿ ಎಂಬ ಹಾರೈಕೆ ನಮ್ಮದು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!