ಯುನೈಟೆಡ್ ಎಂಪವರ್ಮೆಟ್ ಅಸೋಸಿಯೇಷನ್(ರಿ.) ಇದರ ಪುತ್ತೂರು ಝೋನಲ್ ಮೀಟ್ -2025 ಕಾರ್ಯಕ್ರಮವು ಪುತ್ತೂರಿನ ಮಹಾವೀರ ವೆಂಚರ್ಸ್ ಇಲ್ಲಿ ನಡೆಯಿತು.ಯು.ಇ.ಎ ಇದರ ಸ್ಥಾಪನೆಯ ಉದ್ದೇಶ ಅದರ ಕಾರ್ಯ ವೈಖರಿಯ ಸಂಪೂರ್ಣ ವಿವರಣೆಯನ್ನು ಯ.ಇ.ಎ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಅಹ್ಮದ್ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯ.ಇ.ಎ ಇದರ ರಾಜ್ಯ ಉಪಾಧ್ಯಕ್ಷರಾಗಿರುವ ನಝಿರ್ ಅಲ್ಫ ಇವರು ವಹಿಸಿದ್ದರು.ಕಾರ್ಯಕ್ರಮಕ್ಕೆ ಅಬ್ದುಲ್ ಸಮದ್ ಸಂಟ್ಯಾರ್ ಇವರು ಕಿರಾಅತ್ ಮೂಲಕ ಚಾಲನೆ ನೀಡಿದರು.ಯು.ಇ.ಎ ಇದರ ರಾಜ್ಯ ಕೋಶಾಧಿಕಾರಿಯಾಗಿರುವ ಸಿರಾಜ್ ಪುತ್ತೂರು ನೂತನ ಪದಾಧಿಕಾರಿಗಳ ಘೋಷಣೆಯನ್ನು ಮಾಡಿದರು.

2025-28 ರ ಅವಧಿಗೆ ನೂತನ ಸಮಿತಿಯಲ್ಲಿ ಕೋರ್ ಕಮಿಟಿಗೆ ಹಾಜಿ ಅಶ್ರಫ್ ಶಾ ಮಾಂತೂರು, ಹಂಝತ್ ಖಾನ್ ಪೋಲ್ಯ,ಇರ್ಷಾದ್ ಪಲ್ಲತ್ತೂರು, ತಾಹಿರ್ ಹುಸೈನ್ ಸಾಲ್ಮರ, ಹಾಗೂ ಫೈರೋಝ್ ಮೂಡೋಡಿ ಇವರು ಆಯ್ಕೆಗೊಂಡರು.ಪುತ್ತೂರು ಝೋನ್ ಸಮಿತಿಯ ಗೌರವಾಧ್ಯಕ್ಷರಾಗಿ ಹಂಝತ್ ಖಾನ್ ಪೋಲ್ಯ , ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಬಿ ಎಚ್ ಬಪ್ಪಳಿಗೆ, ಉಪಾಧ್ಯಕ್ಷರುಗಳಾಗಿ ಹಬೀಬ್ ಮಾಣಿ, ಸಿರಾಜ್ ಪರ್ಲಡ್ಕ, ತಸ್ಲೀಮ್. ಪಿ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಕೌಡಿಚ್ಚಾರ್, ಕಾರ್ಯದರ್ಶಿಗಳಾಗಿ ಆಸೀಫ್ ತಂಬುತ್ತಡ್ಕ, ಅಶ್ರಫ್ ಮುಕ್ವೆ, ಇಫಾಝ್ ಬನ್ನೂರು, ಕೋಶಾಧಿಕಾರಿಯಾಗಿ ರವೂಫ್ ರೆಡ್ ಗೈಸ್, ಸ್ಪೋರ್ಟ್ಸ್ & ಸಂಘಟನಾ ಕಾರ್ಯದರ್ಶಿಗಳಾಗಿ ಶಮೀರ್ ಯುನಿಟಿ ಕೂರ್ನಡ್ಕ, ನ್ಯಾಯವಾದಿ ಶಾಕೀರ್ ಹಾಜಿ ಮಿತ್ತೂರು, ಮುಕ್ತಾರ್ ಕುಂಬ್ರ, ಶಮೀರ್ ಎಸ್ ಎಸ್ ಸ್ಕೇಲ್,ಮಾಧ್ಯಮ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸಾಲ್ಮರ, ಆಯ್ಕೆ ಸಮಿತಿಯ ಕೋ ಒರ್ಡಿನೇಟರ್ಗಳಾಗಿ ಹಮೀದ್ ಕೂರ್ನಡ್ಕ, ಅಶ್ರಫ್ ಪುತ್ತೂರು, ಝಿಯಾದ್ ರೆಂಜ, ಏರಿಯಾ ಉಸ್ತುವಾರಿಗಳಾಗಿ ಖಾದರ್ ಕಬಕ, ನೌಶಾದ್ ಬೊಲ್ವಾರ್,ಹನೀಫ್ ರೆಂಜಾಲಾಡಿ, ಸಮದ್ ಸಂಪ್ಯ,ಹಾಫಿಲ್ ಕೂರ್ನಡ್ಕ, ಮೋನು ಬಪ್ಪಳಿಗೆ, ಶಂಸುದ್ದಿನ್ ಕೆಮ್ಮಾಯಿ,ಹಾರೀಸ್ ಕಬಕ, ಬಷೀರ್ ಪರ್ಲಡ್ಕ, ಅಬ್ದುಲ್ ಅಜಿಝ್ ಪರ್ಲೊಟ್ಟು, ಅಲಿ ಗೋಳಿಕಟ್ಟೆ, ರಿಯಾಝ್ ಬಳಕ್ಕ, ಖಲಂದರ್ ಬುಲೇರಿಕಟ್ಟೆ, ಹನೀಫ್ ದರ್ಬೆ ನಂದಿನಿ, ಅಶ್ರಫ್ ಸನ್ ಶೈನ್, ಶಫೀಕ್ ಕೆ ಎಂ ಹಾಗೂ ಆಸೀಫ್ ಕಬಕ ಕೆ ಎಸ್ ಇವರು ಆಯ್ಕೆಗೊಂಡರು.
ವೇದಿಕೆಯಲ್ಲಿ ಎಲ್ ಟಿ ಅಬ್ದುಲ್ ರಝಾಕ್ ಹಾಜಿ, ಪುತ್ತೂರು ಸಿಟಿ ಬಜಾರ್ ಹಸನ್ ಹಾಜಿ, ಹಾಗೂ ಯು ಇ ಎ ಇದರ ರಾಜ್ಯ ಸಮಿತಿಯ ಪದಾಧಿಕಾರಿಗಳಾಗಿರುವ ಶೇಖ್ ದಾವೂದ್,ಇರ್ಫಾನ್ ಕಾರ್ಕಳ, ಫಯಾಝ್ ಪಟ್ಲ, ಸಿದ್ದಿಕ್ ಉಳ್ಳಾಲ, ರಿಯಾಝ್ ಉಳ್ಳಾಲ,ಶಾಕಿರ್ ಅಳಕೆಮಜಲು ಹಾಗೂ ಉಬೈದುಲ್ಲಾ ವಿಟ್ಲ ಉಪಸ್ಥಿತರಿದ್ದರು.ಯುನೈಟೆಡ್ ಎಂಪವರ್ಮೆಟ್ ಅಸೋಸಿಯೇಷನ್(ರಿ.) UEA ರಾಜ್ಯ ಸಮಿತಿ ಉಪಾಧ್ಯಕ್ಷರಾಗಿರುವ ಸಾಲ್ಮರ ಶರೀಫ್ ಕಾರ್ಯಕ್ರಮ ಆಯೋಜಿಸಿದರು.
ಮುರ್ಶಿದ್ ಪುತ್ತೂರು ಸ್ವಾಗತಿಸಿ, ಹನೀಫ್ ರೆಂಜಲಾಡಿ ಧನ್ಯವಾದ ಸಲ್ಲಿಸಿದರು,ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿದರು.