ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಪ್ರಮುಖವಾಗಿ ಒಮೈಕ್ರಾನ್ ಪ್ರಬೇಧದ ಕುರಿತು ಕಾಳಜಿಯನ್ನು ವ್ಯಕ್ತಪಡಿದ್ದಾರೆ. ಜೊತೆಗೆ, 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಪ್ರಮುಖ ಘೋಷಣೆ ಮಾಡಿದ್ದಾರೆ.ಜನವರಿ 3ರಿಂದ ಈ ಲಸಿಕೆ ನೀಡಲು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ “ಒಮೈಕ್ರಾನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾರೂ ಹೆದರುವ ಅವಶ್ಯಕತೆಯಿಲ್ಲ. ಸಮಾಧಾನವಾಗಿರಿ. ಮಾಸ್ಕ್ ಗಳನ್ನು ಸರಿಯಾಗಿ ಬಳಸಿ. ನಿಮ್ಮ ಕೈಗಳನ್ನು ಸಮಯಕ್ಕೆ ಸರಿಯಾಗಿ ತೊಳೆಯುತ್ತಿರಿ. ನಾವು ವೈರಸ್ ತಡೆಗಟ್ಟುವಲ್ಲಿ ಹೆಚ್ಚಿನ ಗಮನ ನೀಡಿದರೆ ನಮ್ ಆತ್ಮವಿಶ್ವಾಸವೂ ಹೆಚ್ಚುತ್ತದೆ.
ದೇಶದಲ್ಲಿ 15 ಲಕ್ಷ ಐಸೋಲೇಶನ್ ಬೆಡ್ ಗಳು, ಆಕ್ಸಿಜನ್ ಸಪೋರ್ಟೆಡ್ ಬೆಡ್, ಗಳು, ಐಸಿಯು ಬೆಡ್ ಗಳು, ತುರ್ತು ಬೆಡ್ ಗಳು ಕೂಡಾ ದೇಶದಲ್ಲಿವೆ. ದೇಶದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಪ್ಲಾಂಟ್ ಗಳಿವೆ. ನಾಲ್ಕು ಲಕ್ಷ ಆಕ್ಸಿಜನ್ ಸಿಲಿಂಡರ್ ಗಳ ವ್ಯವಸ್ಥೆಯಿದೆ. ಬೂಸ್ಟರ್ ಡೋಸ್ ನೀಡುವ ಕುರಿತೂ ಆಲೋಚಿಸುತ್ತಿದ್ದೇವೆ.” ಎಂದು ತಿಳಿಸಿದರು.