ಮಂಡ್ಯ: ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತಷ್ಟು ಹೆಮ್ಮರವಾಗುತ್ತಿದ್ದು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಾಲಾ ಕಾಲೇಜು ಮಂಡಳಿ ಹರ ಸಾಹಸನೇ ಪಡುತ್ತಿದೆ.
ಇವುಗಳ ಮದ್ಯೆ ಮಂಡ್ಯ ಕಾಲೇಜೊಂದರಲ್ಲಿ ಬೀವಿ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದಿದ್ದು ಇದೇ ವೇಳೆ ನಡೆದುಕೊಂಡು ಬರುವ ವೇಳೆಯಲ್ಲಿ ಕೇಸರಿ ಶಾಲು ಧರಿಸಿದ ಹಲವಾರು ವಿದ್ಯಾರ್ಥಿಗಳು ಮುಸ್ಕಾನಳನ್ನು ಸುತ್ತುವರೆದಿದ್ದು ಜೈ ಶ್ರೀರಾಮ್ ಘೋಷಣೆ ಕೂಗ ತೊಡಗಿದ್ದಾರೆ.
ಇದೇ ವೇಳೆ ಒಬ್ಬಂಟಿ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಎಂದು ಏಕಾಂತವಾಗಿ ಹೇಳುತ್ತಾ ಮುನ್ನಡೆದಿದ್ದು ವಿದ್ಯಾರ್ಥಿನಿಯ ಕೆಚ್ಚೆದೆಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದೀಗ ಬೀವಿ ಮುಸ್ಕಾನ್ ಸೋಶಿಯಲ್ ಮಿಡಿಯಾದಲ್ಲಿ ಸಂಪೂರ್ಣ ರಾರಾಜಿಸುತ್ತಿದ್ದು.
ವಿದ್ಯಾರ್ಥಿನಿಯ ಹೋರಾಟಕ್ಕೆ ಹಲವಾರು ಮಂದಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದೀಗ ಎಡ ಕೈ ಎತ್ತಿ ಹೋರಾಟದ ಶಬ್ದವನ್ನೇತ್ತುವ ಮುಸ್ಕನ್ ರವರ ಕಾರ್ಟೋನ್ ಚಿತ್ರ ಇದೀಗ ಎಲ್ಲರ ಪ್ರೊಫೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಮುಂದಿದೆ.