';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಮರ ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದ ಕೊಂಬೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.
ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಮೃತ ವ್ಯಕ್ತಿ. ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತುಂಬಾ ಲವಲವಿಕೆಯಿಂದ ಇದ್ದ ಮೃತ ಯುವಕ ಬಾತಿಷ್ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಕೂಡುರಸ್ತೆ SKSSF ಸಕ್ರಿಯ ಸದಸ್ಯರಾಗಿದ್ದು, ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು. ಇದೀಗ ಯುವಕನ ಅಗಲುವಿಕೆಯ ಸುದ್ದಿ ತಿಳಿದು ಊರು ಶೋಕಸಾಗರದಲ್ಲಿ ಮುಲುಗಿದೆ.
ಮೃತ ವ್ಯಕ್ತಿ ತಾಯಿ, ಪತ್ನಿ, 6 ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ 3 ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.