ಮುಲ್ಕಿ: ಮನೆಯ ಕೊಠಡಿಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಮುಲ್ಕಿ ಸಮೀಪದ ಮಾನಂಪಾಡಿ ಅಮನ್ ತೋಟ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವನನ್ನು ಲವೇಶ್ ಕೋಟ್ಯಾನ್ (25) ಎಂದು ತಿಳಿದುಬಂದಿದೆ.
ಪದವೀಧರನಾಗಿದ್ದ ಈತ ಕೆಲವು ದಿನಗಳ ಹಿಂದೆ ವಿದೇಶಕ್ಕೆ ಗುತ್ತಿಗೆ ಆಧಾರದಲ್ಲಿ ಶಡ್ ಡೌನ್ ಕೆಲಸಕ್ಕೆ ಹೋಗಿಬಂದಿದ್ದನು. ಸದ್ಯ ಊರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದನು.
ಆದರೆ ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಮಹಡಿಯ ಕೋಣೆಯಲ್ಲಿ ಮಲಗಿದ್ದನು. ಇಂದು ಬೆಳಗಿನ ಜಾವ ಕೋಣೆಯಿಂದ ಇನ್ನೂ ಮಗ ಹೊರಗೆ ಬರದೇ ಇರುವುದನ್ನು ಗಮನಿಸಿದ ತಾಯಿ ಸಂಶಯದಿಂದ ತಾಯಿ ಕೋಣೆಯ ಬಾಗಿಲು ಸರಿಸಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈತ ಬೆಳಗಿನ ಜಾವ ಸುಮಾರು ಆರು ಗಂಟೆ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಇವರು ತಂದೆ ತಾಯಿ ಜೊತೆ ಕಳೆದ 2 ವರ್ಷಗಳ ಹಿಂದೆ ಈ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದರು.
ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ವರದಿ ತಿಳಿದುಬಂದಿದೆ. ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.