';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಬೆಳ್ತಂಗಡಿಯಲ್ಲಿ ಕೊಲೆಯಾದ ದಲಿತ ಯುವಕ ದಿನೇಶ್ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು, ಮತ್ತು ಆ ಕುಟುಂಬಕ್ಕೆ ನ್ಯಾಯ ಕೊಡಬೇಕು ಮತ್ತು ಕೊಲೆಗಾರ ಸಂಘಪರಿವಾರ ನಾಯಕ ಕೃಷ್ಣನ ಬಿಡುಗಡೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ‘ದಿನೇಶ್ ಕನ್ಯಾಡಿಗೆ ನ್ಯಾಯ ಕೊಡಿ’ ಎಂಬ ಬೇಡಿಕೆಯೊಂದಿಗೆ ನಾಳೆ (ಮಾ.29) ರಂದು ಬೆಳ್ತಂಗಡಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಜಾಥವನ್ನು ಹಮ್ಮಿಕೊಂಡಿದೆ.
ಹಾಗಾಗಿ ನ್ಯಾಯ ಬಯಸುವ ಎಲ್ಲಾ ಪ್ರಜ್ಞಾವಂತ ನಾಗರಿಕರು ಈ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು SDPI ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್ ಕರೆ ನೀಡಿದ್ದಾರೆ.
ಬೆಳ್ತಂಗಡಿಯಿಂದ ಹೊರಟ ಪಾದೆಯಾತ್ರೆ ಸುನ್ನತ್ ಕೆರೆಯ ವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿಂದ ನೇರ ಮಂಗಳೂರಿ ಜ್ಯೋತಿ ಸರ್ಕಲ್’ ವರೆಗೆ ವಾಹನ ಜಾಥಾ ನಡೆಯಲಿದೆ. ನಂತರ ಜ್ಯೊತಿ ಸರ್ಕಲ್’ನಿಂದ ಡಿಸಿ ಕಛೇರಿಗೆ ಮತ್ತೆ ಕಾಲ್ನಡಿಯ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಲಿದ್ದಾರೆ.