ಮಂಗಳೂರು: ಇತ್ತೀಚೆಗೆ ವಕ್ಫ್ ಸದಸ್ಯರಾಗಿ ಆಯ್ಕೆಯಾಗಿದ್ದ SKSSF ರಾಜ್ಯಾಧ್ಯಕ್ಷ ಅನೀಸ್ ಕೌಸರಿ ವಕ್ಫ್ ಸದಸ್ಯತ್ವವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಈ ಹಿಂದಿನ ಸಮಿತಿಯ ಅವದಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನೂತನ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಬಿಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಅಧ್ಯಕ್ಷರಾಗಿರುವ ಸಮಿತಿಗೆ skssf ರಾಜ್ಯಧ್ಯಕ್ಷ ಅನೀಸ್ ಕೌಸರಿ ಸೇರಿದಂತೆ ಹಲವರನ್ನು ಸದಸ್ಯರಾಗಿ ನೇಮಕಗೊಳಿಸಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶ ಹೊರಡಿಸಿತ್ತು . ಇದೀಗ ತಮಗೆ ಸಿಕ್ಕ ಹುದ್ದೆಯನ್ನು ಸ್ವೀಕರಿಸಲು ಅನೀಸ್ ಕೌಸರಿ ಅವರು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರ ಕುರಿತು ಡಿಟಿವಿ ಕನ್ನಡದ ಜೊತೆ ಮಾತನಾಡಿದ ಅನೀಸ್ ಕೌಸರಿ ಅವರು, ವೈಯ್ಯಕ್ತಿಕ ಕಾರಣಗಳಿಂದ ನನಗೆ ಸಿಕ್ಕ ವಕ್ಫ್ ಸದಸ್ಯತ್ವ ಹುದ್ದೆಯನ್ನು ನಿರಾಕರಿಸಿದ್ದೇನೆ. ನನ್ನನ್ನು ಗುರುತಿಸಿ ದ.ಕ ಜಿಲ್ಲಾ ವಖ್ಫ್ ಸಲಹಾ ಸಮಿತಿ ಸದಸ್ಯನಾಗಿ ಆಯ್ಕೆ ಮಾಡಿರುವುದಕ್ಕೆ ವಖ್ಫ್ ಬೋರ್ಡ್ ಚೇರ್ಮಾನ್ ಬಹು.ಶಾಫಿ ಸಹದಿ ಹಾಗೂ ಸಂಬಂಧಪಟ್ಟವರಿಗೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ನನ್ನ ವೈಯಕ್ತಿಕ ಕಾರಣಗಳಿಂದ ನನಗೆ ಆ ಹುದ್ದೆಯಲ್ಲಿ ಸಕ್ರೀಯನಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಿಲ್ಲ ಎಂಬುವುದನ್ನು ಮನಗಂಡು ನನ್ನನ್ನು ಮುಕ್ತಗೊಳಿಸಬೇಕಾಗಿ ವಿನಂತಿಸಿದ್ದೇನೆ ಎಂದು ಹೇಳಿದರು.