ಗದಗ : ಯಾವುದೇ ಭಾಗದಲ್ಲಿ ಇನ್ನು ಮುಂದೆ ಒಂದು ಹಿಂದು ಹುಡುಗಿಯನ್ನು ಮುಸ್ಲಿಂ ಹುಡುಗ್ರು ಹಾರಿಸಿಕೊಂಡು ಹೋದರೆ ಹಿಂದು ಯುವಕರೇ ನೀವು 10 ಮುಸ್ಲಿಂ ಹುಡುಗಿಯನ್ನು ಹಾರಿಸಿಕೊಂಡು ಹೋಗಿ ಎಂದು ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಶಿರಹಟ್ಟಿ ಪಟ್ಟಣದಲ್ಲಿ ಬಹಿರಂಗ ಸಮಾವೇಷದಲ್ಲಿ ಮಾತನಾಡಿದ ಇವರು ” ಇತ್ತೀಚೆಗೆ ಹಿಂದು ಯುವತಿಯರನ್ನು ಲವ್ ಜಿಹಾದ್ ಮಾಡಲಾಗುತ್ತಿದೆ.
ಹಿಂದೂ ಹೆಣ್ಣು ಮಕ್ಕಳಿಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ನಂಬಿಸಿ ವ್ಯವಸ್ಥಿತವಾಗಿ ವಂಚನೆ ಮಾಡಲಾಗುತ್ತಿದ್ದು ಇಂತಹ ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ. ನಿಮ್ಮ ಮಕ್ಕಳಿಗೆ ಬುದ್ಧಿ ಹೇಳಿ ” ಅಂತ ಮುಸ್ಲಿಂ ಮುಖಂಡರಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆಯ ಕರೆಯನ್ನು ನೀಡಿದರು.
ಈ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಈ ಮಣ್ಣಿನ ಕಣ ಕಣದಲ್ಲಿಯೂ ಶಿವಾಜಿ ರಕ್ತ ಇದೆ ಎಂದು ಹೇಳಿದರು.
ಅದೇ ರೀತಿ ಆಕ್ರೋಶಿತರಾಗಿ ಮಾತನಾಡಿದ ಅವರು “ ಓವೈಸಿ ಒಬ್ಬ ನಾಯಿ , ನಿನ್ನಂತವರನ್ನು ಬಹಳ ಜನರನ್ನ ನೋಡಿದ್ದೀವೆ ನಾವು 20 ಕೊಟಿ ಮುಸ್ಲಿಂರು 100 ಕೋಟಿ ಹಿಂದೂಗಳನ್ನು ನಾಶ ಮಾಡುತ್ತೇವೆ ಅಂತಾನೆ . ಟಿಪ್ಪು ಸುಲ್ತಾನ, ಗೋರಿ, ಘಜನಿ, ಬಾಬಾರ್ ಗಳನ್ನ ಗೋರಿ ಮಾಡಿದ್ದೇವೆ ” ಅಂತ ಗುಡುಗಿದರು.
ಜಾತಿಗಳ ಆಚರಣೆ ಮನೆಯಲ್ಲಿರಲಿ ಹೊರಗೆ ಬಂದ್ರೆ ಹಿಂದೂ ಅಂತ ಹೆಮ್ಮೆಯಿಂದ ಹೇಳಿ ಎಂದ ಅವರು ಶಾಸಕ ಜಮೀರ್ ಅಹ್ಮದ್ ವಿರುದ್ಧ ವಾಗ್ದಾಳಿ ಸಹ ನಡೆಸಿದರು . ಇನ್ನು “ ಬೆಂಗಳೂರಿನಲ್ಲಿ ಅಮಾಯಕ ಚಂದ್ರು ಎಂಬ ಯುವಕನ ಕೊಲೆ ಮಾಡಲಾಗಿದೆ ಕಲ್ಲಂಗಡಿ ಹಣ್ಣು ಒಡೆದಿದ್ದು ನೆನಪಾಗುತ್ತೆ ಚಂದ್ರು ಕೊಲೆ ನೆನಪಾಗಿಲ್ವಾ ನಿಮಗೆ!? ಮುಸ್ಲಿಮರ ಬಚಾವ್ ಮಾಡಲು ಏನೇನ್ ಮಾಡ್ತಿಯಾ ನಾಚಿಕೆ ಆಗಲ್ವಾ ” , ಸ್ವಾತಂತ್ರ್ಯ ಸಿಗುವ ವೇಳೆ ಶ್ರೀರಾಮ ಸೇನೆ ಇದ್ದಿದ್ದರೆ ಇಂದು ಪಾಕಿಸ್ತಾನ ಇರುತ್ತಿರಲಿಲ್ಲ ಎಂದು ಏಕವಚನದಲ್ಲಿ ಜಮೀರ್ ಗೆ ತರಾಟೆ ತಗೆದುಕೊಂಡರು.