ಮೊಸಳೆ ಬೇಟೆಯನ್ನು ಹಿಡಿಯಲು ತನ್ನ ಚೂಪಾದ ಹಲ್ಲುಗಳನ್ನು ಬಳಸುತ್ತವೆ. ಒಮ್ಮೆ ಹಿಡಿದ ಬೇಟೆಯನ್ನು ಮೊಸಳೆ ಬಿಡುವುದು ಕಷ್ಟಸಾಧ್ಯ. ಹಿಡಿದ ಬೇಟೆ ಸಾಯುವವರೆಗೂ ತನ್ನನ್ನು ತಾನು ಸುತ್ತುತ್ತದೆ. ಇದನ್ನು ಡೆತ್ ರೋಲ್ ಎಂದು ಕರೆಯುತ್ತಾರೆ. ವಾಸ್ತವವಾಗಿ, ಮೊಸಳೆಯ ಬಲವಾದ ದವಡೆಗಳು ಆಮೆಯ ಚಿಪ್ಪನ್ನು ಭೇದಿಸುವಷ್ಟು ಶಕ್ತಿಯುತವಾಗಿವೆ. ಮೊಸಳೆ ದೊಡ್ಡ ಬೇಟೆಯನ್ನು ಹಿಡಿದರೆ ಅದನ್ನು ನೀರಿಗೆ ಎಳೆದುಕೊಂಡು ಹೋಗುತ್ತದೆ. ಬೇಟೆಯನ್ನು ನಿಗ್ರಹಿಸಲು ಮತ್ತು ತಪ್ಪಿಸಿಕೊಳ್ಳದಂತೆ ಕಚ್ಚಿದ ನಂತರ ಅದು ಡೆತ್ ರೋಲ್ ಮಾಡುತ್ತದೆ.
ಇಲ್ಲಿ ಮಹಿಳೆಯೊಬ್ಬಳು ಮೊಸಳೆಗೆ ಆಹಾರವನ್ನು ನೀಡುತ್ತಿದ್ದ ವೇಳೆ ಮೊಸಳೆ ಆಕೆಯ ಕೈಯನ್ನು ಕಚ್ಚಿದೆ. ಉತಾಹ್ (ಯುಎಸ್) ನಲ್ಲಿರುವ ಪೆಟ್ಟಿಂಗ್ ಮೃಗಾಲಯದಲ್ಲಿ ಮೊಸಳೆ ಹ್ಯಾಂಡ್ಲರ್ ಆಗಿರುವ ಲಿಂಡ್ಸೆ ಬುಲ್, ಮೊಸಳೆಯಿಂದ ದಾಳಿಗೊಳಗಾದ ನಂತರ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹ್ಯಾಂಡ್ಲರ್ ವಾಸ್ತವವಾಗಿ ಮೂರು ವರ್ಷಗಳಿಂದ ಡಾರ್ತ್ ಗೇಟರ್ ಎಂಬ 11 ವರ್ಷದ ಮೊಸಳೆಯೊಂದಿಗೆ ಕೆಲಸ ಮಾಡುತ್ತಿದ್ದಳು. ಪ್ರವಾಸಕ್ಕೆಂದು ನೆರೆದಿದ್ದ ಮಕ್ಕಳ ಗುಂಪಿನ ಮುಂದೆ ಮೊಸಳೆಗೆ ಆಹಾರ ನೀಡುತ್ತಿದ್ದಳು. ಅವಳು ಎಂದಿನಂತೆ ಮೊಸಳೆಯನ್ನು ನೀರಿಗೆ ತಳ್ಳಲು ಹೋದಾಗ ಅವಳ ಕೈಯನ್ನು ಕಚ್ಚಿದೆ. ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ. ರಕ್ಷಣಾತ್ಮಕ ಗಾಜಿನ ಹಿಂದಿನಿಂದ ನೋಡುತ್ತಿರುವ ಮಕ್ಕಳು ಮಮ್ಮಿ ಎಂದು ಕೂಗುವುದು ಕೇಳಿಸಿದೆ. ಮೊಸಳೆ ಮಹಿಳೆಯನ್ನು ನೀರಿನಲ್ಲಿ ಉರುಳಿಸಲು ಪ್ರಾರಂಭಿಸಿದಾಗ, ಅದರೊಂದಿಗೆ ಉರುಳದಿದ್ದರೆ ಅವಳು ತನ್ನ ಕೈಯನ್ನು ಕಳೆದುಕೊಳ್ಳಬಹುದು ಎಂದು ಹೇಳಿದ್ದಾಳೆ.
ಪ್ರವಾಸಿಗರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಹೆಬ್ಬಾವುಗಳನ್ನು ನಿರ್ವಹಿಸುವ ಅನುಭವವನ್ನು ಹೊಂದಿದ್ದು, ಅವನು ತೊಟ್ಟಿಯೊಳಗೆ ಹಾರಿ ಮೊಸಳೆಯ ಬೆನ್ನಿನ ಮೇಲೆ ಕುಳಿತುಕೊಳ್ಳುತ್ತಾನೆ. ನಂತರ ಅವರು ಮೊಸಳೆ ತನ್ನ ದವಡೆಗಳನ್ನು ತೆರೆದು ಅವಳ ಕೈಯನ್ನು ಬಿಡಲು ಕಾಯುತ್ತಾರೆ. ಮೊಸಳೆ ಕಚ್ಚುವಿಕೆಯು ಅವಳ ಮಣಿಕಟ್ಟಿನ ಹಿಂಭಾಗದಲ್ಲಿರುವ ಸ್ನಾಯು ಒಂದು ತುಂಡರಿಸಿದೆ. ಮತ್ತು ಅವಳ ಹೆಬ್ಬೆರಳಿನ ಮೂಳೆ ಕತ್ತರಿಸಿದೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.